ಸರಳವಾಗಿ ಕಕ ವಿಮೋಚನಾ ದಿನಾಚರಣೆ

ಸಿರವಾರ.ಸೆ.೧೭- ಈಗಿನ ಕಲ್ಯಾಣ ಕರ್ನಾಟಕದ ಭಾಗದವರಾದ ನಮಗೆ ಈ ದಿನ ಅತ್ಯಂತ ಮಹತ್ವದ ದಿನವಾಗಿದೆ, ಎಲ್ಲಾರೂ ಸೇರಿ ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕು ಎಂದು ಸಿರವಾರ ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ ಹೇಳಿದರು.
ಪಟ್ಟಣದ ಪಿಡಬ್ಲ್ಯೂಡಿ ಕ್ಯಾಂಪಿನ ಶಾಲೆಯ ಆವರಣದಲ್ಲಿ ತಾಲೂಕ ಆಡಳಿತ ಹಮ್ಮಿಕೊಂಡಿದ ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ದ್ವಜಾರೋಹಣ ಮಾಡಿ ನಂತರ ಮಾತನಾಡಿದ ಅವರು ಸೆಪ್ಟೆಂಬರ್ ೧೭, ೧೯೪೮ ಇತಿಹಾಸದಲ್ಲಿ ಮಹತ್ವದ ದಿನ. ಇದನ್ನು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.ಹೈದರಾಬಾದ್ ಕರ್ನಾಟಕದಲ್ಲಿ ಬೀದರ್, ಗುಲ್ಬರ್ಗಾ,ಯಾದಗೀರಿ ಮತ್ತು ರಾಯಚೂರು,ಕೊಪ್ಪಳ ಈಶಾನ್ಯ ಜಿಲ್ಲೆಗಳ ದೊಡ್ಡ ಭಾಗಗಳನ್ನು ಒಳಗೊಂಡಿತ್ತು.
ನಿಜಾಮನು ತನ್ನ ಆಡಳಿತವನ್ನು ಬಲವಂತದಿಂದ ಉರುಳಿಸುವವರೆಗೂ ಭಾರತಕ್ಕೆ ಸೇರಲು ನಿರಾಕರಿಸಿದನು. ನಿಜಾಮರ ವಿರುದ್ಧದ ‘ಪೊಲೀಸ್ ಕ್ರಮ’ದ ನಂತರ, ಹೈದರಾಬಾದ್ ಪ್ರಾಂತ್ಯ ಮತ್ತು ಅದರ ನಾಗರಿಕರು ೧೭ ಸೆಪ್ಟೆಂಬರ್ ೧೯೪೮ ರಂದು ಸ್ವತಂತ್ರರಾದರು. ಈ ದಿನವನ್ನು ಕರ್ನಾಟಕ ಸರ್ಕಾರವು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವೆಂದು ಆಚರಿಸುತ್ತದೆ. ಇದನ್ನು ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತಿದೆ. ಇಂತಹ ಮಹತ್ವದ ದಿನವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕಾಗಿದೆ. ಆದರೆ ಜನರ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. ಪ.ಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮುದುಕಪ್ಪ ಬಾಗಲವಾಡ,ಖಜಾನೆಯ ವೆಂಕಟಾಚಲ ಯಾದವ್, ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಡಿ. ಶಿಕ್ಷಕ ರಾಮಣ್ಣ ಕೇಶಪ್ಪ ಲಕ್ಷ್ಮೀ, ಮಂಜುಳಾ ಸಂಗಡಿಗರಿಂದ ನಾಡಗೀತೆ, ರೈತ ಗೀತೆಯನ್ನು ಹಾಡಲಾಯಿತು. ಸಿರವಾರ ಠಾಣೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ನಿರುಪಣೆಯನ್ನು ಮಂಜುಳಾ ಸಗರದ್, ಅಮರೇಶ, ಮಾಡಿದರು.