ಸರಳವಾಗಿ ಅಂಬೇಡ್ಕರ ಜಯಂತಿ ಆಚರಣೆ

ಕಾಳಗಿ:ಏ.14: ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕಿರಣ ಪಾಟೀಲ ಅವರು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ನೀತಿ ಸಂಹಿತೆ ಜಾರಿ ಇರುವ ಕಾರಣ ಸರ್ಕಾರದ ಆದೇಶದ ಮೇರೆಗೆ ಸರಳವಾಗಿ ತಾಲೂಕ ಪಂಚಾಯಿತಿ ಸಿಬ್ಬಂದಿಗಳೊಂದಿಗೆ ಆಚರಿಸಿದರು.

ನರೇಗಾ ಸಹಾಯಕ ನಿರ್ದೇಶಕರು ಗಂಗಾಧರ, ತಾಲೂಕು ಪಂಚಾಯಿತಿ ಸಿಬ್ಬಂದಿಗಳಾದ ನರಸಯ್ಯ ಗುತ್ತೇದಾರ್, ಗಿರೀಶ ಕಲಶೆಟ್ಟಿ, ಜಗನ್ನಾಥ್ ತಳವಾರ, ಮಹೇಂದ್ರ ಕಾಳಗಿ, ಭುವನೇಶ್ವರಿ, ಮಮತಾ, ಅಲಿ ಉಪಸ್ಥಿತರಿದ್ದರು.