ಸರಳತೆಯೇ ಬದುಕಿನ ಪಾಠವಾಗಲಿ

ಗಬ್ಬೂರು.ಅ.30-ಸರಳವಾಗಿ ಬದುಕುವರಲ್ಲಿ ಸದ್ಗುಣಗಳು ತನ್ನಿಂತಾನೇ ಹುಟ್ಟಿಕೊಳ್ಳುತ್ತೆವೆ. ಕೋಟ್ಯಂತರ ಜನರ ನಡುವೆ ಯಾರು ಸರಳ ರೀತಿಯಲ್ಲಿ ಜೀವಿಸುವರೋ ಅಂತಹವರನ್ನು ದೇವತೆಗಳು ಗೌರವಿಸುವರು. ಮನುಷ್ಯ ಆಡಂಬರತೆ ತೋರುವುದರಿಂದ ದೂರವಿರಲು ಮೊದಲು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು.
ಮನಸ್ಸಿನೊಳಗೊಂದು, ಹೊರಗೊಂದು ವಿಚಾರ ಇರಬಾರದು. ಯಾರನ್ನು ಅಗೌರದಿಂದ ನೋಡುವ ಅಥವಾ ಅಪಹಾಸ್ಯಿಕ್ಕೀಡು ಮಾಡುವ ವಿಚಾರಗಳಿದ್ದರೆ ಅಂತಹವುಗಳನ್ನು ಮೊದಲು ಮನಸ್ಸಿನಿಂದ ದೂರ ತಳ್ಳಬೇಕು. ಮನದೊಳಗೆ ಕುಟಿಲತೆ ಇರುವವರೆಗೂ ಸಜ್ಜನಿಕೆಯ ವ್ಯಕ್ತಿತ್ವ ರೂಢಿಗತವಾಗದು. ಮೇಧಾವಿಯಾಗಿದ್ದ ಚಾಣಕ್ಯ ಮೌರ್ಯ ಸಾಮ್ರಾಜ್ಯದ ಅಧಿಪತಿಗೆ ಗುರುವಾಗಿದ್ದ.
ಬುದ್ಧಿವಂತ ಧರ್ಮಪಾಲಕನಾಗಿದ್ದುದರ ಜತೆಗೆ ಸರಳತೆಯೇ ಜೀವನ ಎಂದು ಬದುಕಿದ್ದ. ಈ ಕಾರಣಕ್ಕಾಗಿ ಆತನ ಬಗ್ಗೆ ಇಡೀ ಸಾಮ್ರಾಜ್ಯವೇ ಗೌರವ ಹೊಂದಿತ್ತು. ನಾವು ಎಷ್ಟೇ ದೊಡ್ಡವರಾಗಿರಲಿ, ಶ್ರೀಮಂತಿಕೆ ಇರಲಿ ಆದರೆ ಸರಳವಾಗಿ ಬದುಕುವ, ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಗುಣಸ್ವಭಾವ ತಮ್ಮೊಳಗಿರಬೇಕು. ಅಂದಾಗ ಮಾತ್ರ ನೈಜ ಸುಖ ಅನುಭವಿಸಲು ಸಾಧ್ಯ. ಮನಸ್ಸಿನೊಳಗೆ ಒಬ್ಬರ ಮೇಲೆ ವಿಷಕಾರುತ್ತ. ಎದುರಿಗೆ ಅವರನ್ನು ಹೊಗಳುವುದು ಎಷ್ಟು ಸಮಂಜಸ ? ಇದು ನಮ್ಮ ವ್ಯಕ್ತಿತ್ವವನ್ನೇ ಕುಗ್ಗಿಸುತ್ತದೆ. ಇಂತಹ ಕುಟಿಲತೆಯ ಗುಣವಿಟ್ಟು ಎಲ್ಲರೋಳಗೊಂದಾಗುವ, ಎಲ್ಲರೂ ಮೆಚ್ಚುವಂತೆ ಸರಳತೆಯ ಜೀವನ ಸಾಗಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ದೇವಿಯ ಸ್ವರೂಪನಾದ ಸುಲ್ತಾನಪುರು ಮಠದ ಪೀಠಾಧಿಪತಿಯಾದ ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ವಚನಾಮೃತದ ಮೂಲಕ ತಿಳಿಸಿದರು.