ಸರದಾರ ಜೋಗಾ ಸಿಂಗ್‍ಜಿ ಸ್ಮರಣಿಸಿ ಕ್ರಿಕೇಟ್ ಪಂದ್ಯಾವಳಿ ಆಯೋಜನೆ

ಬೀದರ:ಜ.13:ಗುರು ನಾನಕ ದೇವ್ ಇಂಜಿನೀಯರಿಂಗ್ ಕಾಲೇಜ್‍ನÀಲ್ಲಿರುವ ಪಂಥ ರತನ ಶಿರೋಮಣಿ ಸರದಾರ ಜೋಗಾ ಸಿಂಗ್‍ಜೀ ಮೆಮೋರಿಯಲ್ ಕ್ರೀಡಾಂಗಣದಲ್ಲಿ ಗುರು ನಾನಕ ಆಸ್ಪತ್ರೆವತಿಯಿಂದ ಹಮ್ಮಿಕೊಂಡ ಪಂಥ ರತನ ಶಿರೋಮಣಿ ಸರದಾರ ಜೋಗಾ ಸಿಂಗ್‍ಜೀ ಅವರ 91ನೇ ಹುಟ್ಟು ಹಬ್ಬ ನಿಮಿತ್ಯ ಕ್ರೀಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಈ ಕ್ರಿಕೇಟ್ ಪಂದ್ಯಾವಳಿಗೆ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ|| ಎಸ್.ಬಲಬೀರ ಸಿಂಗ್ ಮತ್ತು ಗುರು ನಾನಕ ಸಮೂಹ ಶಿಕ್ಷಣದ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಅವರು ಚಾಲನೆ ಕೊಟ್ಟರು.

ಡಾ|| ರೇಷ್ಮಾ ಕೌರ್ ಅವರು ಮಾತನಾಡುತ್ತÀ ಜೋಗಾ ಸಿಂಗ್ ಅವರ ಹುಟ್ಟ ಹಬ್ಬ ನಿಮಿತ್ಯ ಕ್ರಿಕೇಟ್ ಪಂದ್ಯಾವಳಿ ಹಮ್ಮಕೊಳ್ಳಲಾಗಿದೆ. ಜೋಗಾ ಸಿಂಗ್‍ರವರು ಕ್ರೀಡಾ ಪ್ರೇಮಿಯಾಗಿದ್ದರು. ಅವರು ಹಾಕಿ, ಫುಟ್‍ಬಾಲ್ ಮತ್ತು ಕ್ರಿಕೇಟ್ ನಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದರು. ಅವರ ಆ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡೆಗಳು ಬೀದರಿನ ನೇಹರು ಕ್ರೀಡಾಂಗಣದಲ್ಲಿ ನಡೆಯುತ್ತಿದ್ದವು ಎಂದು ಸ್ಮರಿಸಿದರು.
ಈ ಪಂದ್ಯಾವಳಿಯೂ ಬೀದರ ಜಿಲ್ಲೆಯ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿವರ್ಗ ಆಡಲಿದ್ದಾರೆ ಎಂದು ಹೇಳಿದರು. ಕ್ರಿಕೇಟ್ ಪಂದ್ಯಾವಳಿಯಲ್ಲಿ ಬೀದರ ಜಿಲ್ಲೆಯಿಂದ ವಿವಿಧ ಆಸ್ಪತ್ರೆಗಳಿಂದ ತಂಡಗಳು ಭಾಗವಹಿಸಿವೆ, ಈಗಾಗಲೇ 10 ತಂಡಗಳು ನೊಂದಣಿ ಮಾಡಿಕೊಂಡಿವೆ, ಪಂದ್ಯಾವಳಿಯು ಮೂರು ದಿವಸ ಅಂದರೆ 12, 13 ಮತ್ತು 14 ವರೆಗೆ ಆಯೋಜಿಸಲಾಗಿದೆ. ಅಂತಿಮ ಪಂದ್ಯಾವಳಿಯು 14-01-2024 ರಂದು ನಡೆಯಲಿದೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯವರು ಭಾಗವಹಿಸುತ್ತಿರುವುದು ಖುಷಿ ತಂದಿದೆ, ಯಾವಗಲು ವೈದ್ಯರು ಮತ್ತು ಸಿಬ್ಬಂದಿಯವರು ಒತ್ತಡದಲ್ಲಿರುತ್ತಾರೆ, ಅವರಿಗೆ ದೈಹಿಕ ಸಾಮಥ್ರ್ಯವೂ ಬಹಳ ಮುಖ್ಯ, ಕ್ರೀಡೆಯಲ್ಲಿಯೂ ಆಸಕಸ್ತಿ ತೋರಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಗುರು ನಾನಕ ಆಸ್ಪತ್ರೆಯ ನಿರ್ದೇಶಕ ಸರದಾರ ಪುನೀತ ಸಿಂಗ್, ಸಿಇಓ ಎಸ್.ವಿ. ಕಾಮೇಶ್ವರ ರಾವ, ಸರದಾರ ಪವಿತ್ ಸಿಂಗ್, ಡಾ|| ಸಂಗಮೇಶ ವಾಡಗಾಂವೆ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.