ಸರಣ ಜೀವನದಿಂದ ಬದುಕು ಸಾರ್ಥಕ- ಕಲ್ಮಠಶ್ರೀಗಳು

ಸಿರವಾರ.ಜು.೨೫- ಪರೋಪ ಕಾರ್ಯಯ್ಯ ಪುಣ್ಯಂ ಈ ಶರೀರ ಎಂಬಂತೆ, ಸಾಮಾಜಿಕ ಕಾರ್ಯಗಳನ್ನು, ದಾನ ಧರ್ಮ ಮಾಡುವ ಮೂಲಕ ಸರಳ ಜೀವನ ಬದುಕು ಸಾರ್ಥಕ ಎಂದು ಮಾನ್ವಿ ಕಲ್ಮಠದ ಮಠಾಧ್ಯಕ್ಷರಾದ ವಿಶ್ವರಾಧ್ಯ ಪಂಡಿತ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಉದ್ಯಮಿ ಚುಕ್ಕಿ ಸುವರ್ಣಮ್ಮ ಚುಕ್ಕಿ ಸೂಗಪ್ಪ ಸಾಹುಕಾರ್ ಅವರ ಮದುವೆಯ ಐವತ್ತನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಚುಕ್ಕಿ ಕುಟುಂಬ ಸಾಹಿತ್ಯ, ಸಂಗೀತ, ಶಿಕ್ಷಣ ಕಾರ್ಯಗಳ ಮೂಲಕ ಅನೇಕರಿಗೆ ನೇರವಾಗಿ, ಪ್ರೋತ್ಸಾಹ ನೀಡಿದರ ಜೊತೆಗೆ ಕವಿಗಳನ್ನ, ಲೇಖಕರನ್ನು, ಚಿಂತಕರಿಗೆ ಗುರುತಿಸಿ ಗೌರವಿಸಿ, ಬಸವತತ್ವ ಚಿಂಥನಾ ಗೋಷ್ಠಿಯನ್ನು ಚುಕ್ಕಿ ಪ್ರತಿಷ್ಠಾನ ಮೂಲಕ ಅನೇಕ ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಇರವ ಸಾಮಾಜಿಕ ಕಾರ್ಯಗಳು ಇನ್ನೂ ಹೆಚ್ಚು ಹೆಚ್ಚು ಜರುಗಲಿ, ದಾಂಪತ್ಯ ಜೀವನ ಸುಖಕರವಾಗಿ ಸಾಗಲಿ ಎಂದರು. ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ನೀಲಗಲ್ , ಗಬ್ಬೂರು ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಎನ್.ಎಸ್.ಭೋಸರಾಜು, ಹಂಪಯ್ಯ ನಾಯಕ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಜಿ.ಪಂ.ಮಾಜಿ ಸದಸ್ಯರಾದ ಮಹಾಂತೇಶ ಪಾಟೀಲ ಅತ್ತನೂರು, ಬಷಿರೂದ್ದಿನ್, ಕೆ.ಅಸ್ಲಾಂ ಪಾಷ್, ಮುಖಂಡರಾದ ಎನ್. ಗಿರಿಜಾಶಂಕರ,ಜೆ.ಶರಣಪ್ಪಗೌಡ ಚಂದ್ರಶೇಖರ ಪಾಟೀಲ ಮಿರ್ಜಾಪುರ, ಕೆ.ಶರಣಯ್ಯ ನಾಯಕ, ತಿಮ್ಮಾರಡ್ಡಿ ಭೋಗಾವತಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶರಣಪ್ಪ ಬಿ.ಗಣೇಕಲ್, ವೈ.ಅಮರೇಶಪ್ಪಗೌಡ, ಪರಮೇಶಪ್ಪ ಸಾಲಿಮಠ ಸೇರಿದಂತೆ ಅನೇಕ ಗಣ್ಯರು, ವಿವಿಧ ಮಠದ ಪೂಜ್ಯರು, ಸಾಹಿತಿಗಳು, ಚುಕ್ಕಿ ಕುಟುಂಬದ ಸದಸ್ಯರು, ವಿವಿಧ ಸಂಘಟನೆ ಪದಾಧಿಕಾರಿಗಳು ಸಾವಿರಾರು ಜನರು ಭಾಗವಹಿಸಿ ಶುಭಕೋರಿದರು.