ಸರಣಿ ಹತ್ಯೆ ಹಂತಕರ ಬಂಧನಕ್ಕೆ‌ ಆ.5ರ ಗಡುವು ನೀಡಿದ ಎಚ್ ಡಿಕೆ

ಮಂಗಳೂರು, ಆ.1-ಬದಕ್ಷಿಣ ಕನ್ನಡದಲ್ಲಿ ನಡೆದ ಸರಣಿ ಹತ್ಯೆ ಪ್ರಕರಣದ ಆರೋಪಗಳನ್ನು ಆಗಸ್ಟ್​ 5ರ ಒಳಗೆ ಬಂಧಿಸುವಂತೆ ಸರ್ಕಾರಕ್ಕೆ ಗಡುವು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ‌ ನೀಡಿದ್ದಾರೆ.ಮಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂವರು ಯುವಕರ ಮನೆಗೆ ಭೇಟಿ ನೀಡಿದ ಬಳಿಕ ಮನಸ್ಸು ನೊಂದಿದೆ. ಈ ಮೂರು ಪ್ರಕರಣಗಳ ಆರೋಪಿಗಳ ಬಂಧನವಾಗಬೇಕು. ಆ. 5 ರೊಳಗೆ ನೈಜ ಆರೋಪಿಗಳನ್ನು ಬಂಧಿಸುವಂತೆ ಗಡುವು‌ ನೀಡುತ್ತಿದ್ದೇನೆ ಎಂದು ಹೇಳಿದರು.ರಾಜ್ಯದ ಡಿಜಿಪಿ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದದ್ದು ನೋಡಿ ದೊಡ್ಡ ಮಟ್ಟದ ಸಂದೇಶ ಕೊಡಲು ಬಂದಿದ್ದರು ಎಂದು ತಿಳಿದುಕೊಂಡಿದ್ದೆ. ಅವರು ಕೇವಲ ಐದು ಗಂಟೆ ಇದ್ದು ಹೋಗಿದ್ದಾರೆ ಎಂದು ಕಿಡಿಕಾರಿದರು.ಡಿಜಿಪಿಯವರಿಗಡ ಜವಾಬ್ದಾರಿ ಇದ್ದರೆ ಘಟನೆ ನಡೆದ ಮಾರನೆ ದಿನವೇ ಮಂಗಳೂರಿಗೆ ಬರಬೇಕಿತ್ತು. ಅವರಿಗೆ ಬೆಂಗಳೂರಿನಲ್ಲಿ ಏನು ಕೆಲಸ. ಮುಖ್ಯಮಂತ್ರಿ ಬಂದು ಹೋಗಿದ್ದಾರೆ. ಅದಕ್ಕಿಂತ ದೊಡ್ಡ ಕೆಲಸ ಇತ್ತಾ? ಎಂದು ಅವರು ಪ್ರಶ್ನಿಸಿದರು.
ಆರ್​ಎಸ್​ಎಸ್ ಸಂಘಸಂಸ್ಥೆಗಳು ಏನು ಹೇಳಿವೆ ಎಂದು ಹೇಳಲು ಮಂಗಳೂರಿಗೆ ಭೇಟಿ ನೀಡಿ ವಾಪಸ್ ಹೋಗಿದ್ದಾರೆ. ಅವರು ಪೊಲೀಸ್ ಅಧಿಕಾರಿಯಾಗಿ ಹತ್ಯೆಯಾದವರ ಕುಟುಂಬಗಳನ್ನು ಭೇಟಿ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.