ಸರಣಿ ಗೆಲುವಿನತ್ತ ಭಾರತ

ಮುಂಬೈ, ಡಿ.5- ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜೆಲೆಂಡ್ ಭಾರೀ ಅಂತರದ ಸೋಲಿನ ಸುಳಿಗೆ‌ ಸಿಲುಕಿದೆ. ಭಾರತ‌ ಸರಣಿ ಕೈವಶ ಮಾಡಿಕೊಳ್ಳುವತ್ತ ದಾಪುಗಾಲು ಹಾಕಿದೆ.
ಕಾನ್ಪುರದಲ್ಲಿ ನಡೆದ ಮೊದಲ ಪಂದ್ಯವನ್ನು ರೋಚಕ ಡ್ರಾ ಮಾಡಿಕೊಳ್ಳುವಲ್ಲಿ ನ್ಯೂಜಿಲೆಂಡ್ ಸಫಲವಾಗಿತ್ತು.
ಎರಡನೇ ಪಂದ್ಯದಲ್ಲಿ 540 ರನ್ ಗಳ ಬೃಹತ್ ಮೊತ್ತದ ಸವಾಲಿನ ಬೆನ್ನ ಹತ್ತಿರುವ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 140 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿದೆ.
ಭಾರತ ಬೌಲಿಂಗ್ ದಾಳಿಗೆ ತತ್ತರಿಸಿದೆ. ಡೆರಿಲ್ ಮಿಚೆಲ್ 60 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ಆರಂಭ ಮತ್ತು ಮಧ್ಯಮ‌ ಕ್ರಮಾಂಕದ ಆಟಗಾರು ದಿಟ್ಟ ಆಟ ಪ್ರದರ್ಶಿಸಲು ವಿಫಲರಾದರು.
ಟಾಂ ಲಾಧಮ್ 6, ವಿಲ್ ಯಂಗ್ 20, ರಾಸ್ ಟೇಲರ್ 6 ಹಾಗೂ ಟಾಂ ಬ್ಲಂಡೆಲ್ ಶೂನ್ಯಕ್ಕೆ ನಿರ್ಗಮಿಸಿದರು. ದಿನಾದಟದ ಅಂತ್ಯಕ್ಕೆ ಹೆನ್ರಿ‌ ನಿಕೊಲ್ಸ್ 36 ಹಾಗೂ ರಚಿನ್ ರವೀಂದ್ರ ಖಾತೆ ತೆರೆಯದೆ ಆಡುತ್ತಿದ್ದಾರೆ.
ಭಾರತದ ಗೆಲುವಿಗೆ ಐದು ವಿಕೆಟ್ ಅಗತ್ಯವಿದೆ. ನ್ಯೂಜಿಲೆಂಡ್ ಗೆಲುವಿಗೆ ಇನ್ನೂ 400 ರನ್ ಬೇಕಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್ ಗಳಿಗೆ ಸರ್ವಪತನ ಕಂಡಿತು. ಇದರಿಂದಾಗಿ ಭಾರತ‌ ಮೊದಲ‌ ಇನ್ನಿಂಗ್ಸ್‌ನಲ್ಲಿ 263 ರನ್ ಗಳ ಭಾರೀ ಮುನ್ನಡೆ ಗಳಿಸಿತ್ತು.
ಇದಕ್ಕೂ ಮುನ್ನ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡರು.
ಮಯಾಂಕ್ 62, ಪೂಜಾರ, 47, ಶುಭ್ ಮನ್ ಗಿಲ್ 47, ಕೊಹ್ಲಿ 36 ಹಾಗೂ ಅಕ್ಷರ್ ಪಟೇಲ್ ಅಜೇಯ 41 ರನ್ ಗಳಿಸಿದರು.
ಕಿವೀಸ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಿತ್ತ ಅಜಾಜ್ ಪಟೇಲ್ 4 ಹಾಗೂ ರಚಿನ್ ರವೀಂದ್ರ ಮೂರು ವಿಕೆಟ್‌ ಪಡೆದರು.