ಸರಣಿ ಅಪಘಾತ ನಾಲ್ವರ ಸಾವು

ಚಿಕ್ಕಮಗಳೂರು,ಮೇ.೨೫-ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಎರಡು ವರ್ಷದ ಮಗು ಸೇರಿ ಇಬ್ಬರು ಬಲಿಯಾಗಿರುವ ದುರ್ಘಟನೆ ಕಡೂರು ತಾಲೂಕಿನ ಕೂಡ್ಲೂರು ಗೇಟ್ ಬಳಿ ನಡೆದಿದೆ.
ರಸ್ತೆಯ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ನಡೆದ ಅಪಘಾತದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ೨ ವರ್ಷದ ಮಗು ವಿಕ್ರಾಂತ್ ಮತ್ತು ಕಾರು ಚಾಲಕ ಪೃಥ್ವಿ(೩೬) ಮೃತ ಪಟ್ಟಿದ್ದಾರೆ.
ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಗುಬ್ಬಿಯಿಂದ ಮುರುಡೇಶ್ವರ ದೇಗುಲಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಫಲಕವನ್ನು ಅಳವಡಿಸಿರಲಿಲ್ಲ. ರಸ್ತೆ ಕಾಮಗಾರಿ ಹಿನ್ನೆಲೆ ಮುಖ್ಯ ರಸ್ತೆ ಬಂದ್ ಮಾಡಲಾಗಿತ್ತು.
ಬೈಪಾಸ್ ತಿರುವಿನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಿರಂತರವಾಗಿ ಅಪಘಾತವಾಗುತ್ತಿದ್ರು ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡಿಲ್ಲ. ಬೀರೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಮದ್ಯ ವ್ಯಸನಿಗೆ ಥಳಿತ:
ಅಸಭ್ಯವಾಗಿ ವರ್ತಸಿದ ಮದ್ಯ ವ್ಯಸನಿಗೆ ನಾಲ್ವರು ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಯಾದಗಿರಿಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಜಗಳ ಬಿಡಿಸಲು ಹೋದ ಸಾರ್ವಜನಿಕರ ಜೊತೆಗೆ ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಮಂಗಳಮುಖಿಯರ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಯಾದಗಿರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. \
ಬೈಕ್‌ಗಳ ಡಿಕ್ಕಿ: ಇಬ್ಬರ ಸಾವು
ಎರಡು ದ್ವಿಚಕ್ರ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಪುರವರ ಗ್ರಾಮದ ಹೊರವಲಯದ ಜಯಮಂಗಲಿ ನದಿ ಸೇತುವೆ ಬಳಿ ನಡೆದಿದೆ.
ತಾಲ್ಲೂಕಿನ ಜೋಗೇನಹಳ್ಳಿ ಗ್ರಾಮದ ಹನುಮಕ್ಕ (೪೫) ಹಾಗೂ ಉಪ್ಪಾರಹಳ್ಳಿ ಗ್ರಾಮದ ಹನುಮಂತರೆಡ್ಡಿ (೬೫) ಎಂಬುವರೇ ಸಾವನ್ನಪ್ಪಿರುವ ದುರ್ದೈವಿಗಳು.
ಪುರವರ ಹೋಬಳಿಯ ಕೃಷ್ಣಯ್ಯಪಾಳ್ಯದಿಂದ ಜೋಗೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ತಾಯಿ ಮತ್ತು ಮಗ ಹಾಗೂ ಕೊಡಿಗೇನಹಳ್ಳಿಯಿಂದ ಮಧುಗಿರಿಗೆ ತೆರಳುತಿದ್ದ ಇಬ್ಬರು ಸ್ನೇಹಿತರಿದ್ದ ದ್ವಿಚಕ್ರ ವಾಹನಗಳ ನಡುವೆ ಪುರವರ ಗ್ರಾಮದ ಹೊರವಲಯದ ಜಯಮಂಗಲಿ ನದಿ ಸೇತುವೆ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.
ಅಪಘಾತದ ರಭಸಕ್ಕೆ ಜೋಗೇನಹಳ್ಳಿ ಗ್ರಾಮದ ಹನುಮಕ್ಕ (೪೫) ಸ್ಥಳದಲ್ಲೇ ಮೃತಪಟ್ಟಿದ್ದು, ಈಕೆಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೆಯೇ ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ಹನುಮಂತರೆಡ್ಡಿ ಮತ್ತು ಗಂಗಾಧರಪ್ಪ ಎಂಬುವರು ತೀವ್ರವಾಗಿ ಗಾಯಗೊಂಡಿದ್ದರು. ಈ ಪೈಕಿ ಹನುಮಂತರೆಡ್ಡಿ ಚಿಕಿತ್ಸೆ ಫಲಿಸದೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.