ಸರಡಗಿ ಶ್ರೀಗಳಿಗೆ ಭಕ್ತರಿಂದ ತುಲಾಭಾರ

ಕಲಬುರಗಿ,ಮೇ.10-ತಾಲ್ಲೂಕಿನ ಸುಕ್ಷೇತ್ರ ಶ್ರೀನಿವಾಸ ಸರಡಗಿಯ ಚಿನ್ನದ ಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ಪೀಠಾಧಿಪತಿಗಳಾದ ಡಾ.ರೇವಣಸಿದ್ಧ ಶಿವಾಚಾರ್ಯರ ಷಷ್ಠಿ ಪೂರ್ತಿ ಸಮಾರಂಭದ ಅಂಗವಾಗಿ 9 ದಿನಗಳವರೆಗೆ ಪ್ರವಚನ ಹಮ್ಮಿಕೊಂಡಿದ್ದು, 2ನೇ ದಿನದಂದು ಭಕ್ತರಿಂದ ಪೂಜ್ಯರ ತುಲಾಭಾರ ಕಾರ್ಯಕ್ರಮ ನಡೆಯಿತು.
ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರವಚನಕಾರರಾದ ಬಸ್ಸಯ್ಯ ಶಾಸ್ತ್ರಿಗಳು,ಅರಳಗುಂಡಗಿ, ಗುರುಲಿಂಯ್ಯ ಗವಾಯಿಗಳು, ಹಿತ್ತಲಶಿರೂರ್, ಗಾಯಕರು ಸಂಗಮೇಶ ನೀಲಾ, ಕಲಬುರ್ಗಿ ತಬಲವಾದಕರುಸಂತೋಷ್ ಕುಮಾರ್ ಕಲಬುರ್ಗಿ, ಹಾಗೂ ಮುನ್ನಯ್ಯ ಗೋಳೆದ್ ಮಠರವರು ಕಾರ್ಯಕ್ರಮ ನಿರೂಪಿಸಿದರು ಎಂದು ಬಸವರಾಜ ಶೀಲವಂತ್ ತಿಳಿಸಿದ್ದಾರೆ.