ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದಲ್ಲಿ ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ

ಕಲಬುರಗಿ:ಫೆ.29: ಶ್ರೀ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದ ಸಂಭ್ರಮದ ಜಾತ್ರಾ ಮಹೋತ್ಸವ ಹಾಗೂ ಪೂಜ್ಯ ಶ್ರೀ ಡಾ: ಅಪ್ಪಾರಾವ ದೇವಿ ಮುತ್ಯಾ (ಮಹಾರಾಜರು) ಶಕ್ತಿ ಪೀಠಾಧಿಪತಿಗಳು, ಇವರ 60 ವರ್ಷದ ಷಷ್ಠಿಪೂರ್ತಿ ಸಮಾರಂಭ ಹಾಗೂ ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಾರಕೂಡದ ಪೂಜ್ಯ ಶ್ರೀ ಷ.ಬ್ರ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಉದ್ಘಾಟಿಸಿದರು. ನಂತರ ಶ್ರೀ ದೇವಿ ಗೋಪುರಕ್ಕೆ ಹೆಲಿಕಾಪ್ಟರ್ ಮುಖಾಂತರ ಪುಷ್ಪಾರೋಹಣ ಮಾಡಲಾಯಿತು.
ಪೂಜ್ಯಶ್ರೀ ಷ.ಬ್ರ. ಡಾ. ಸಿದ್ಧರಾಮ ಶಿವಾಚಾರ್ಯರು, ಪೂಜ್ಯ ಶ್ರೀ ಮ.ನಿ.ಪ್ರ ಅಭಿನದ ಶಿವಲಿಂಗ ಮಹಾಸ್ವಾಮಿಗಳು, ಪೂಜ್ಯಶ್ರೀ ಮ.ನಿ.ಪ್ರ ಗುರುಪಾದಲಿಂಗ ಮಹಾಶಿವಯೋಗಿಗಳು, ಪೂಜ್ಯ ಶ್ರೀ ಮ.ನಿ.ಪ್ರ ಷಡಕ್ಷರಿ ಬಸವರಾಜೇಂದ್ರ ಮಹಾಸ್ವಾಮಿಗಳು, ಪೂಜ್ಯಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು, ಪೂಜ್ಯಶ್ರೀ ಮ.ನಿ.ಪ್ರ. ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು, ಪೂಜ್ಯಶ್ರೀ ಮ.ನಿ.ಪ್ರ. ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು, ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ, ಪೂಜ್ಯ ಶ್ರೀ ಷ.ಬ್ರ ಸೋಮಶೇಖರ ಶಿವಾಚಾರ್ಯರು, ಪೂಜ್ಯ ಶ್ರೀ ಷ.ಬ್ರ ಕರಿಸಿದ್ದೇಶ್ವ ಶಿವಾಚಾರ್ಯರು, ಸಂಸದ ಉಮೇಶ ಜಾಧವ, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮೂಡ, ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಬಸವರಾಜ ದೇಶಮುಖ, ಸಮಾಜ ಸೇವಕಿ ಜಯಶ್ರೀ ಬಿ.ಮತ್ತಿಮಡು, ದೊಡ್ಡಪ್ಪಗೌಡ ಪಾಟೀಲ, ಶಿವಕಾಂತ ಮಾಹಾಜನ, ಅರುಣಕುಮಾರ ಪಾಟೀಲ, ಸಂಗಮೇಶ ನಾಗನಹಳ್ಳಿ, ರಮೇಶ ತಿಪ್ಪನೂರ, ವಿನೋದ ಪಾಟೀಲ, ವಿಶ್ವನಾಥ ಪಾಟೀಲ, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ ಸೇರಿದಂತೆ ನಾಡಿನ ಅನೇಕ ಮಠಾಧೀಶರು ಹಾಗೂ ರಾಜ್ಯದ ರಾಜಕೀಯ ಧುರಣಿಯ ಮುಖಂಡರು, ವಿವಿಧ ಗ್ರಾಮಸ್ಥರು, ಭಕ್ತಾಧಿಗಳು ಇದ್ದರು.