
ಕಲಬುರಗಿ,ಮೇ 5: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಸರಗಳ್ಳತನ ಮಾಡಿದ ಸತೀಶ,ಮಲ್ಲೇಶ ಮತ್ತು ರಾಹುಲ್ ಎಂಬ ಅಪರಾಧಿಗಳಿಗೆ 5 ನೇ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರಸಾಬ್ ಅಬ್ದುಲ್ ರಜಾಕ್ ಮುಲ್ಲಾ ಅವರು 3 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
2015 ರ ಆಗಸ್ಟ್ 1 ರಂದು ಬೈಕ್ ನಲ್ಲಿ ಬಂದಿದ್ದ ಅಪರಾಧಿಗಳು ಮಹಿಳೆಯೊಬ್ಬರ ಬಳಿ ವಿಳಾಸ ಕೇಳುವ ನೆಪದಲ್ಲಿ 10 ಗ್ರಾಮ್ ತೂಕದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದರು.ನಂತರ ಹೀರಾಪುರ ರೈಲ್ವೆ ಗೇಟ್ ಬಳಿ ಸಿಕ್ಕಿ ಬಿದ್ದಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕರಾದ ಜಯಶ್ರೀ ಪರುತಯ್ಯ ಅವರು ವಾದ ಮಂಡಿಸಿದ್ದರು.