ಸರಗಳ್ಳತನ, ವಾಹನ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

ಮೈಸೂರು,ಆ.6:- ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಿದ ಪೆÇಲೀಸರು 5,00,000ರೂ. ಮೌಲ್ಯದ ಒಟ್ಟು 127 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು ರೂ 1,50,000 ಮೌಲ್ಯದ ಮೂರು ದ್ವಿಚಕ್ರ ವಾಹಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ನಗರದ ನರಸಿಂಹರಾಜ ವಿಭಾಗದ ಎಸಿಪಿ ಸ್ಕ್ವಾಡ್ ಮತ್ತು ನರಸಿಂಹರಾಜ ಪೆÇಲೀಸ್ ಠಾಣಾ ಪೆÇಲೀಸರು 22/07/2022 ರಂದು ಸರಗಳ್ಳತನ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನಿಬ್ಬರು ಸಹಚರರೊಂದಿಗೆ ಸೇರಿ ಕಳ್ಳತನ ಮಾಡುತ್ತಿರುವುದಾಗಿ ನೀಡಿದ ಮಾಹಿತಿ ಮೇರೆಗೆ 26-07-2022 ರಂದು ಕಾರಾಗೃಹದಲ್ಲಿದ್ದ ಇನ್ನಿಬ್ಬರನ್ನು ಪೆÇಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದ 5,00,000ರೂ. ಮೌಲ್ಯದ ಒಟ್ಟು 127 ಗ್ರಾಂ ತೂಕದ 5 ಚಿನ್ನದ ಸರಗಳು ಮತ್ತು ರೂ 1,50,000 ರೂ ಮೌಲ್ಯದ ಮೂರು ದ್ವಿಚಕ್ರ ವಾಹಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ನಗರ ನರಸಿಂಹರಾಜ-1, ಜ್ಞಾನ ಭಾರತಿ ಠಾಣೆ-1, ಬ್ಯಾಡರಹಳ್ಳಿ ಠಾಣೆ-1, ತಾವರಕೆರೆ ಠಾಣೆ-1, ಕನಕಪುರ ಠಾಣೆ-2, ಕೆ.ಆರ್.ಎಸ್ ಠಾಣೆ-1, ನಂಜನಗೂಡು ಗ್ರಾಮಾಂತರ ಠಾಣೆ-1, ಪಾಂಡವಪುರ ಠಾಣೆ-1, ಕಿರುಗಾವಲು ಠಾಣೆಯ-1 ದ್ವಿ ಚಕ್ರ ವಾಹನ ಮತ್ತು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ ಪ್ರದೀಪ್ ಗುಂಟಿ ಮತ್ತು ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ಗೀತ ಎಂ.ಎಸ್ ಹಾಗೂ ನರಸಿಂಹರಾಜ ವಿಭಾಗದ ಎ.ಸಿ.ಪಿ ಎಂ ಶಿವಶಂಕರ ಅವರ ಮಾರ್ಗದರ್ಶನದಲ್ಲಿ ನರಸಿಂಹರಾಜ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ ಪೆಕ್ಟರ್ ಅಜರುದ್ದೀನ್, ಪಿ.ಎಸ್.ಐ ಗಂಗಾಧರ್ ಕೆ.ಎಸ್, ಎ.ಎಸ್.ಐ ರವಿ, ಎ.ಎಸ್.ಐ ಅನಿಲ್ ಕೆ ಶಂಕಪಾಲ್ ಮತ್ತು ಸಿಬ್ಬಂದಿಗಳಾದ ಎ,ಸಿ,ಪಿ ಸ್ವ್ಕಾಡ್ ನ ಲಿಂಗರಾಜಪ್ಪ, ರಮೇಶ್, ಸುರೇಶ್, ಮಂಜುನಾಥ ಆರ್.ಆರ್, ಹನುಮಂತ ಕಲ್ಲೇದ, ಮಹೇಶ್ ವೈ.ಟಿ, ದೊಡ್ಡೇಗೌಡ, ಬಸವರಾಜು, ಸುನೀಲ್ ಕುಮಾರ್.ಸಿ, ಈರೇಶ್. ಕೆ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಗುರುದೇವ್ ಆರಾದ್ಯ, ಮಂಜು ಸಿ.ಎಂ, ಕುಮಾರ್ ಪಿ, ಶ್ಯಾಮ್ ಸುಂದರ್ ಅವರುಗಳು ಮಾಡಿರುತ್ತಾರೆ.