ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಯಶಸ್ವಿ ಬಂಧಿನ

ಕೆ.ಆರ್.ಪೇಟೆ:ಏ:08: ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಸರಗಳ್ಳತನ ಮಾಡಿದ್ದ ಪ್ರಕರಣದ ಆರೋ ಪಿಗಳನ್ನು ಪತ್ತೆಹಚ್ಚುವಲ್ಲಿ ಪಟ್ಟಣದ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ.ಅಶ್ವಿನಿ ಪತ್ರಿಕಾ ಪ್ರಕಟಣೆ ನೀಡಿ ಆರೋಪಿಗಳಾದ ಹೆಚ್.ಎಂ.ಚೇತನ್ ಬಿನ್ ಮಧನ್ ನಂದಿನ ಲೇಔಟ್ ಹಾಸನದವನಾಗಿದ್ದು ಹಾಗೂ ಕೆ.ಡಿ.ಪ್ರದೀಪ ಬಿನ್ ದೇವರಾಜು ತಾಲ್ಲೂಕಿನ ಕಸಬಾ ಹೋಬಳಿಯ ಕುರ್ನೇನಹಳ್ಳಿ ಗ್ರಾಮದವರಾಗಿದ್ದು ದಿನಾಂಕ 05-03 2021 ರಂದು ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಕೆ.ಆರ್.ಪೇಟೆ ಟೌನ್ ಜಯನಗರ ಬಡಾವಣೆಯಲ್ಲಿ ರಮೇಶ್ ಎಂಬುವವರ ಪತ್ನಿ ಅರುಣಾ ರವರಿಗೆ ಸೇರಿದ ಸುಮಾರು 180000 ಬೆಲೆಬಾಳುವ 60 ಗ್ರಾಂ ಮಾಂಗಲ್ಯದ ಸರವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದರು. ಈ ಕುರಿತು ತನಿಖೆ ನಡೆಸಲು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ.ಅಶ್ವಿನಿ ಅಡಿಷನಲ್ ಎಸ್ಪಿ ಡಾ.ಧನಂಜಯ ಹಾಗೂ ಡಿವೈಎಸ್ಪಿ ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನೇತೃತ್ವದಲಿ ವೃತ್ತ ನಿರೀಕ್ಷಕ ಎಂ.ಕೆ.ದೀಪಕ್, ಪಿಎಸ್‍ಐಗಳಾದ ಬ್ಯಾಟರಾಯಗೌಡ, ಎಸ್.ಸಿ.ಸುರೇಶ್ ಮತ್ತು ಕ್ರೈಂ ವಿಭಾಗದ ಪ್ರಮೋದ್ ಅವರನ್ನೊಳಗೊಂಡ ಎರಡು ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಕೊನೆಗೂ ಆರೋಪಿಗಳನ್ನು ಮೈಸೂರಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹೆಡ್‍ಕಾನ್ಸ್ಟೇಬಲ್‍ಗಳಾದ ಬಿ.ಎಸ್.ಚಂದ್ರಶೇಖರ್, ಬಿ.ಎಸ್.ಉಮೇಶ್, ಶ್ರೀಧರ, ಮರಿಯಪ್ಪ ಕಾನ್ಸ್ಟೇಬಲ್‍ಗಳಾದ ಎಸ್.ಅರುಣ್‍ಕುಮಾರ್, ಜಯವರ್ಧನ, ಬಿ.ರೇವಣ್ಣ, ಮನು, ದಿನೇಶ್, ಪ್ರಕಾಶ್‍ಪಾಟೀಲ್, ಡ್ರೈವರ್‍ಗಳಾದ ವಿರೂಪಾಕ್ಷ, ರವಿ, ವಾಸು, ಹಾಗೂ ಎಸ್ಪಿ ಕಚೇರಿಯ ಸಿಬ್ಬಂದಿಗಳಾದ ರವಿಕಿರಣ್,ಲೋಕೇಶ್ ಭಾಗವಹಿಸಿದ್ದರು.