ಸರಗಳ್ಳತನ: ಆರೋಪಿ ಬಂಧನ-1.60 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಜಪ್ತಿ

ಕಲಬುರಗಿ,ಸೆ.11-ರಾತ್ರಿ ಕನ್ನ, ಮನೆ ಕಳವು ಮತ್ತು ಸರಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸ್ಟೇಷನ್ ಬಜಾರ್ ಪೊಲೀಸರು 1.60 ಲಕ್ಷ ರೂ.ಮೌಲ್ಯದ ನಗದು ಮತ್ತು ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಬಾಪು ನಗರದ ವಿಕ್ರಮ್ ಅಲಿಯಾಸ್ ವಿಕ್ಕಿ ತಂದೆ ಮೋಹನ್ ಉಪಾಧ್ಯಾಯ (28) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಅವರ ನಿರ್ದೇಶನದ ಮೇರೆಗೆ ಉಪ ಪೊಲೀಸ್ ಆಯುಕ್ತರಾದ ಕನ್ನಿಕಾ ಸಿಕ್ರಿವಾಲ್ ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಉಪ ವಿಭಾಗದ ಸಹಾಯಕ ಆಯುಕ್ತ ಭೂತೇಗೌಡ ಅವರ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಕೀಲ್ ಅಹ್ಮದ್ ಅಂಗಡಿ, ಪಿಎಸ್‍ಐ ವಂದನಾ, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ದೇವೆಂದ್ರ, ಈರಣ್ಣ, ಮೋಶಿನ್, ಫಿರೋಜ್, ಬೋಗೇಶ್, ವಿಠ್ಠಲ, ಸಂಗಣ್ಣ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.