ಸರಗಳ್ಳತನವಾಗಿದ್ದ ಮನೆಗೆ ಎಎಸ್ಪಿ ಉದೇಶ್ ಭೇಟಿ: ಪರಿಶೀಲನೆ

ಮಧುಗಿರಿ, ಆ. ೩- ಪಟ್ಟಣದಲ್ಲಿ ಸರಗಳ್ಳತವಾಗಿದ್ದ ಮಹಿಳೆಯ ಮನೆಗೆ ಅಡಿಷನಲ್ ಎಸ್ಪಿ ಉದೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮಾಹಿಕಿ ಕಲೆ ಹಾಕಿದರು.
ಪಟ್ಟಣದ ೧೯ನೇ ವಾರ್ಡ್‌ನಲ್ಲಿ ಅನ್ನಪೂರ್ಣ ಮಧುಸೂದನ್ ಎಂಬುವರ ಮನೆಗೆ ಅನಾಮಿಕ ವ್ಯಕ್ತಿಗಳು ಬಂದು ಒಡವೆಗಳನ್ನು ಪಾಲಿಷ್ ಮಾಡಿಕೊಡುತ್ತೇವೆ ಎಂದು ಹೇಳುತ್ತಾ ೪೫ ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದರು.
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಅವರು ಸರ ಕಳೆದುಕೊಂಡಿದ್ದವರ ಮನೆಗೆ ಮತ್ತು ಅಕ್ಕಪಕ್ಕದ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಎಸ್. ಸರ್ದಾರ್ ಮತ್ತಿತರರು ಇದ್ದರು.