ಸರಕು ಸೇವೆ ರೈಲಿಗೆ ಪ್ರಧಾನಿ ಹಸಿರು ನಿಶಾನೆ

ನವದೆಹಲಿ,ಜ.೭- ಹರಿಯಾಣದ ನ್ಯೂ ರವೇರಿ- ನ್ಯೂ ಮಾದರ್ ನಡುವೆ ೩೦೬ ಕಿಲೋಮೀಟರ್ ಉದ್ದದ ಸರಕು ಸಾಗಣೆ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಹಸಿರು ನಿಶಾನೆ ತೋರಿದರು.

ರವೇರಿ ಜಿಲ್ಲೆಯಲ್ಲಿ ೭೯ ಕಿಲೋಮೀಟರ್ ಹಾಗೂ ರಾಜಸ್ಥಾನದಲ್ಲಿ ೨೨೭ ಕಿಲೋಮೀಟರ್ ನಡುವೆ ಸಂಪರ್ಕ ಕಲ್ಪಿಸಲಾಗಿದೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಮೊದಲ ಒಂದೂವರೆ ಕಿಲೋಮೀಟರ್ ಕಂಟೈನರ್ ರೈಲಿಗೂ ಚಾಲನೆ ನೀಡಿದರು. ಈ ರೈಲು ಸಂಪೂರ್ಣ ವಿದ್ಯುಚ್ಚಾಲಿತ ರೈಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ವರ್ಚುವಲ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ರಾಜಸ್ಥಾನ ಮತ್ತು ಹರಿಯಾಣದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಪಾಲ್ಗೊಂಡಿದ್ದರು.

ಸರಕು ಸೇವೆ ರೈಲು ಸಂಘಟನೆಯಿಂದ ರವೇರಿ, ಪನೇಸಾರ್, ನರ್ನಾಲ್, ಕೃಷ್ಣಗರ್ ಸೇರಿದಂತೆ ಹರಿಯಾಣ ಮತ್ತು ರಾಜಸ್ಥಾನ ನಡುವೆ ಉತ್ತಮ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ ಇದರ ಸೌಲಭ್ಯವನ್ನು ಎರಡು ರಾಜ್ಯಗಳ ಜನ ಪಡೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಸರಕು ಸೇವೆ ರೈಲಿಗೆ ಚಾಲನೆ ನೀಡಿದ ಬಳಿಕ ಪ್ರಧಾನಮಂತ್ರಿ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ