
ಬೆಂಗಳೂರು,ಆ.೧೩-
ಸರಕು ಸಾಗಣೆಯನ್ನು ಮಾಲಿನ್ಯ ಮುಕ್ತ ಮಾಡುವ ಸಾಮೂಹಿಕ ಪ್ರಯತ್ನದಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಚಾರವು ಪ್ರಮುಖ ಪಾತ್ರವಹಿಸಲಿದೆ.
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಮುನ್ನಡೆಸುವಲ್ಲಿನ ಪ್ರಮುಖ ಹೆಜ್ಜೆಯಾಗಿದ್ದು ಪರಿಸರ ಸ್ನೇಹಿಯಾಗಿ ಗ್ರಾಹಕರಿಗೆ ಸರಕು ವಿತರಿಸಲು ವಿದ್ಯುತ್ ಚಾಲಿತ ಲಾರಿ ಇನ್ನಿತರ ಬಳಕೆ ಹೆಚ್ಚಿಸಲು ಐಷರ್ ಮತ್ತು ಅಮೆಜಾನ್ ಸಹಯೋಗ ಹೊಂದಿವೆ.
ವಿದ್ಯುತ್ ಚಾಲಿತ ಐಷರ್ ಟ್ರಕ್ ಹಾಗೂ ಬಸ್‌ಗಳು ಅಮೆಜಾನ್‌ನ ಕೇಂದ್ರಗಳ ಮಧ್ಯೆ ಹಾಗೂ ಗ್ರಾಹಕರ ಬಾಗಿಲಿಗೆ ಸರಕು ವಿತರಣೆಗೆ ಮತ್ತಷ್ಟು ವೇಗ ನೀಡಲು ಪಾಲುದಾರಿಕೆಯು ನೆರವಾಗಲಿದೆ.
ಸುಮಾರು ಒಂದು ಸಾವಿರ ಅತ್ಯಾಧುನಿಕ, ಶೂನ್ಯ ಪ್ರಮಾಣದ ಹೊಗೆ ಹೊರಸೂಸುವ ವಿದ್ಯುತ್‌ಚಾಲಿತ ಟ್ರಕ್‌ಗಳನ್ನು ವಿವಿಧ ಸರಕು ಸಾಗಣೆ ಸಾಮರ್ಥ್ಯದ ವಿಭಾಗಗಳಲ್ಲಿ ಅಮೆಜಾನ್‌ನ ಸಾರಿಗೆ ಸೇವೆ ಪಾಲುದಾರರ ಜೊತೆಗೆ ಪರಿಚಯಿಸುವ ಗುರಿ ಹೊಂದುವ ಮೂಲಕ ಮಹತ್ವದ ಮೈಲುಗಲ್ಲನ್ನು ಪ್ರತಿನಿಧಿಸುತ್ತದೆ.
ಈ ಸಹಯೋಗದ ಮೊದಲ ಹಂತವಾಗಿ, ೨೦೨೪ರ ಅಂತ್ಯದ ವೇಳೆಗೆ ದೆಹಲಿ, ಮಾನೇಸರ್ ಮತ್ತು ಗುರುಗ್ರಾಮ್‌ನಂತಹ ಪ್ರಮುಖ ನಗರಗಳಲ್ಲಿ ಮಧ್ಯಮ ಮೈಲಿ ಮತ್ತು ಕೊನೆಯ ಮೈಲಿ ವಿತರಣೆಗಳಿಗಾಗಿ ಅಮೆಜಾನ್ ಐಷರ್‌ನ ೫೦ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಬಳಸಿಕೊಳ್ಳಲಿದೆ ಎಂದು ನೀತಿ (ಎನ್‌ಐಟಿಐ) ಆಯೋಗದ ಸಲಹೆಗಾರ ಸುಧೇಂದು ಜ್ಯೋತಿ ಸಿನ್ಹಾ ತಿಳಿಸಿದ್ದಾರೆ.