ಸರಕಾರ ಕಮರ್ಷಿಯಲ್ ಬಿಲ್ ಹೆಚ್ಚಿಸುವ ನಿರ್ಧಾರ ಕೈ ಬಿಡಬೇಕು

ಕಲಬುರಗಿ:ಜೂ.27: ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ 200 ಯುನಿಟ್ ವಿದ್ಯುತ್ ಉಚಿತ ಸೇರಿ ಇತರೆ ಘೋಷಣೆಗಳ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ.ಅಧಿಕಾರಕ್ಕೆ ಬಂದ ಮೇಲೆ 200 ಯುನಿಟ್ ಉಚಿತವೆಂದು ಹೇಳಿ ಈಗ ಕಮರ್ಷಿಯಲ್ ಬಿಲ್ ಹೆಚ್ಚಿಸುವ ನಿರ್ಧಾರವನ್ನು ಕೈ ಬಿಡಬೇಕೆಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕಮರ್ಷಿಯಲ್ ಬಿಲ್ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಸರಕಾರದ ನಿರ್ಧಾರದಿಂದ ಉತ್ಪಾದಕರು ಕಚ್ಚಾವಸ್ತುಗಳ ನೆಲೆ ಹೆಚ್ಚಿಸುವ ನಿರ್ಧಾರವನ್ನು ಮಾಲೀಕರುಗಳು ಮುಂದಾಗಿರುವುದು ಮತ್ತೆ ಸಾರ್ವಜನಿಕರ ಮೇಲೆ
ಹೊರೆಯಾಗಲಿದೆ ಎಂದರು.ದಿನನಿತ್ಯ ಬಳಸುವ ಸಾಮಾಗ್ರಿಗಳು ಹಲವು ಉತ್ಪನ್ನಗಳ ಬೆಲೆ ಹೆಚ್ಚಳವಾದರೆ ಕೊನೆಗೆ ಖರೀದಿದಾರರ ಮೇಲೆ ಬೆಲೆ ಹೆಚ್ಚಳದ ಹೊರೆ ಬೀಳುವುದರಿಂದ ಸುತ್ತಿ ಬಳಸಿ ಬೆಲೆ ಏರಿಕೆಯ ಬಿಸಿಯನ್ನು ಸಾರ್ವಜನಕರೇ ಅನುಭವಿಸಬೇಕಾಗುತ್ತದೆ. ಈಗಾಗಲೇ ಅಕ್ಕಿ ಗಿರಣಿಗಳು,ಹೋಟೆಲ್ ಮಾಲೀಕರು, ಹಲವು ಕೈಗಾರಿಕೆಗಳು,ಕೆಎಂಎಪ್ ಕಂಪನಿಗಳು ಬೆಲೆ ಏರಿಕೆ ಸುಳಿವುಗಳನ್ನು ನೀಡಿದ್ದು,ಹಂತಹಂತವಾಗಿ ಮುಂದೆ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುವುದರಿಂದ ಉಚಿತ ವಿದ್ಯುತ್ ನೀಡಲು ಸರ್ಕಾರ ನಮ್ಮಿಂದ ಹಣವನ್ನು ಹಿಂಬದಿಯಿಂದ ಪಡೆಯಲು ಹೊರಟಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬರುತ್ತಿದೆ ಎಂದು ಹೇಳಿದರು.ಕಮರ್ಷಿಯಲ್ ವಿದ್ಯುತ್ ಏರಿಕೆಯ ನಿರ್ಧಾರವನ್ನು ತಕ್ಷಣ ಕೈ ಬಿಟ್ಟು ಸಾರ್ವಜನಿಕರಿಗೆ ಇದರಿಂದಾಗುವ ಹೊರೆಯನ್ನು ತಪ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.