ಸರಕಾರ ಎಲೆಮರೆ ಕಲಾವಿರನ್ನು ಗುರುತಿಸಲಿ

ಸೇಡಂ : ಮಾ. 28:ಆಧುನಿಕ ಮಾದ್ಯಮದ ಪ್ರಭಾವದಿಂದ ಯುವ ಜನತೆ ದಾರಿ ತಪ್ಪುವ ಹಂತದಲ್ಲಿದೆ. ದೊಡ್ಡಾಟದಂತಹ ಕಲೆಗಳನ್ನು ಉಳಿಸಲು ಶಿಕ್ಷಣವಂತರು ತಯಾರಾಗಬೇಕು. ಶಾಲಾ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು ಈ ಕಲೆಯನ್ನು ಬೇಳೆಸುವ ನಿಟ್ಟಿನಲ್ಲಿ ಕೆಲಸಮಾಡಬೇಕು ಇಲ್ಲದಿದ್ದರೆ ದೊಡ್ಡಾದಂತಹ ಕಲೆಗಳು ಕಣ್ಮರೆಯಾಗುತ್ತವೆ ಎಂದು ಕಳವಳ ವ್ಯಕ್ತಪಡಿಸುತ್ತಾ ತಾತೂಕಿನ ಜಾಕನಪಲ್ಲಿಯ ತಿಂಗಳ ಸಂಜೆ ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆ ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ದೊಡ್ಡಾಟದ ಹಾಡುಗಳು ಮತ್ತು ರಂಗ ಕರ್ಮಿಗಳಿಗೆ ರಂಗ ಗೌರವ ಕಾರ್ಯಕ್ರಮವನ್ನು ನಟ ಮತ್ತು ತಾಲೂಕ ಸರಕಾರಿ ನೌಕರರ ಸಂಘ ಸೇಡಂ ನ ಮಾಜಿ ಅಧ್ಯಕ್ಷರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ ತಾಳ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಂದು ಮತ್ತು ಇಂದು ಸಿನೆಮಾಗಳಲ್ಲಿ ಹೆಸರು ಮಾಡಿರುವವರು ರಂಗಭೂಮಿಂದ ಬಂದವರೆ. ಜಾಕನಪಲ್ಲಿ ಸಣ್ಣ ಹಳ್ಳಿಯಾದರೂ ಇಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆ ಮಾಡುತ್ತಿವುದು ಸಂತೋಷದ ಸಂಗತಿ. ಇಲ್ಲಿಯ ನಿರಂತರ ರಂಗ ಚಟುವಟಿಕೆಗಳು ಮಕ್ಕಳನ್ನು ಶಿಕ್ಷಣದತ್ತ ಆಸಕ್ತಿ ತೊರಲು ಕಾರಣವಾಗಿದೆ. ಸರಕಾರ ಹಳ್ಳಿಗಳಲ್ಲಿರುವ ಎಲೆಮರೆ ಕಾಯಿಯಂತಿರುವ ದೊಡ್ಡಾಟದ ಕಲಾವಿದರನ್ನು ಗುರುತಿಸಲಿ ಮತ್ತು ಅವರ ದೊಡ್ಡಾಟದ ಪ್ರದರ್ಶನಗಳು ಆಯೋಜಿಸಿ ಪ್ರೋತ್ಸಾಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ತಿಂಗಳ ಸಂಜೆ ವೇದಿಕೆ ಅದ್ಯಕ್ಷ ಸಿದ್ದಯ್ಯ ಸ್ವಾಮಿ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವೆಂಕಟರೆಡ್ಡಿ ಚಿಟೇಲಿ, ಗೌಡನಳ್ಳಿಯ ಶಿವಾರೆಡ್ಡಿ, ಮಕ್ಕಳ ವೇದಿಕೆ ಅಧ್ಯಕ್ಷ ಕು.ಪಲ್ಲವಿ, ರಂಗ ಶಿಕ್ಷಕ ಅಶೋಕ ತೊಟ್ನಳ್ಳಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪ್ರೌಢ ಶಾಲೆ ಮುಖ್ಯ ಗುರುಗಳಾದ ಸುಧಾಮಣಿ ನೇರಲ್ಗಿ ವಹಿಸಿದ್ದರು.
ಕಾರ್ಯಕ್ರಮನ್ನು ಶಿವಲೀಲಾ ಶೇರಿ ನಡೆಸಿದರು, ತಿಂಗಳ ಸಂಜೆ ವೇದಿಕೆಯ ಕಾರ್ಯದರ್ಶಿ ಸಿದ್ದಪ್ಪ ತಳವಾರ ಸ್ವಾಗತಿಸಿದರು. ಉಮಾಶ್ರೀ ಶೇರಿ ವಂದಿಸಿದರು. ಶಾಲಾ ಮಕ್ಕಳಿಂದ ರಂಗ ಗೀತೆ ನಡೆಯಿತು.
ಶಿಕ್ಷಕರಾದ ದೊಡ್ಡಕಿಷ್ಟಪ್ಪ ಪೂಜಾರ, ನೀಲಕಂಠ ನಾಯ್ಕ, ಶ್ರೇಯರಾಣಿ, ಪ್ರಾಥಮಿಕ ಶಾಲಾ ಎಸ.ಡಿ.ಎಮ್.ಸಿ ಅಧ್ಯಕ್ಷ ಸಿದ್ದಣ್ಣ ವಿಶ್ವಕರ್ಮ, ಅಶೋಕರೆಡ್ಡಿ ರುದ್ರವಾರ, ಸಿದ್ದಪ್ಪ ಪುಲಮೊಳ್, ಲಕ್ಷ್ಮಣ ದೊಡ್ಡಮನಿ ಸಭೆಯಲ್ಲಿ ಭಾಗವಹಿಸಿದರು.