ಸರಕಾರ ಆದೇಶದಂತೆ ನಿವೇಶನ ಮಂಜೂರು ಮಾಡಲು ಆಗ್ರಹ

ರಾಯಚೂರು,ಜು.೧೬- ಸರಕಾರ ಆದೇಶ ಸೆ.೨೯, ೨೦೧೪ ಪ್ರಕಾರ ವಿಶೇಷ ವರ್ಗದಲ್ಲಿ ಬರುವವರನ್ನು ಗುರುತಿಸಿ ಸಮೀಕ್ಷೆ ಮಾಡಿ ನಿವೇಶನ ಮಂಜೂರು ಮಾಡಲು ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದಲ್ಲಿ ಸುಮಾರು ಜನ ಕುಷ್ಠರೋಗದಿಂದ ಗುಣಮುಖರಾದವರು, ಹೆಚ್.ಐ.ವಿ. ಸೋಂಕಿಗೆ ಒಳಗಾದವರು ದೇವದಾಸಿಯರು, ಅಲೆಮಾರಿ ಜನಾಂಗದವರು, ಮತೀಯ ಗಲಭೆ ಹಾಗೂ ಚಳುವಳಿಗಳಿಂದ ಹಾನಿಗೊಳಗಾದವರು ದೌರ್ಜನ್ಯಕ್ಕೆ ಒಳಗಾದವರು, ಜೀತದಿಂದ ಮುಕ್ತರಾದವರು, ವಿಧವೆಯರು ಇತ್ಯಾದಿಯರಿಗೆ, ನಿವೇಶನವಿಲ್ಲದೆ ಬೀದಿ ಬದಿ, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ.
ಇವರನ್ನು ಸಮಾಜ ದೂರದಿಂದ ನೋಡುತ್ತದೆ. ಇದುವರೆಗೂ ನಗರದಲ್ಲಿ ವಾಸಿಸುವ ವಿಶೇಷ ವರ್ಗದಲ್ಲಿ ಬರುವವರು ಸರಕಾರದಿಂದ ಯಾವುದೇ ಸೌಲಭ್ಯ ಪಡೆದಿರುವುದಿಲ್ಲ. ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾಡಳಿತ ಇವರನ್ನು ಗುರುತಿಸಿರುವುದಿಲ್ಲ. ಇವರನ್ನು ಗುರುತಿಸಿ ಆಯ್ಕೆ ಮಾಡಲು ಜಿಲ್ಲಾ ಸಮಿತಿಯು ರಚನೆಯಾಗಿರುತ್ತದೆ. ಆದರೂ ವಿಶೇಷ ವರ್ಗದವರನ್ನು ನಿರ್ಲಕ್ಷಿಸಿದ್ದರಿಂದ ಇವರಿಗೆ ದೊರೆಯಬೇಕಾದ ಸೌಲಭ್ಯಗಳು ದೊರೆಯದೆ ವಂಚನೆಗೊಳಗಾಗಿರುತ್ತಾರೆ. ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾಡಳಿತಗಳು ವಂಚಿತ ಸಮುದಾಯಗಳ ಪರ ಇರುವಂತ ಆದೇಶಗಳನ್ನು ಮುಚ್ಚಿಟ್ಟು ಏನು ಗೊತ್ತಿಲ್ಲದ ಹಾಗೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಮಿತಿ ಜವಾಬ್ದಾರಿಗಳ ಪ್ರಕಾರ ಸಮೀಕ್ಷೆಯಲ್ಲಿ ಗುರುತಿಸಿದ ವಸತಿ ರಹಿತರು ನಿವೇಶನ ರಹಿತರಾಗಿದ್ದಲ್ಲಿ ವಸತಿಗೆ ಸೂಕ್ತವಾದ ಸರಕಾರಿ ಹಾಗೂ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಸಮಿತಿ ವಿಶೇಷ ವರ್ಗದವರನ್ನು ಗುರುತಿಸಿ ನಿವೇಶನ ಹಾಗೂ ವಸತಿ ಮಂಜೂರಿ ಮಾಡುವುದೆಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದರು ಇದುವರೆಗೂ ವಿಶೇಷ ವರ್ಗದವರಿಗೆ ಜಿಲ್ಲಾಡಳಿತ ವಂಚಿಸಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಆದೇಶ ಸಂಖ್ಯೆ ವಇ೩೩ ಹೆಚ್‌ಎಹೆಚ್-೨೦೧೩ ಸೆ.೨೯, ೨೦೧೪ ರ ಪ್ರಕಾರ ನಗರದಲ್ಲಿರುವ ಬೀದಿ ವ್ಯಾಪಾರಿಗಳು, ವಿಕಲಚೇತನರು, ಕುಷ್ಠರೋಗದಿಂದ ಗುಣಮುಖರಾದವರು, ದೇವದಾಸಿಯರು, ವಿಧವೆಯರು, ಜೀತದಿಂದ ಮುಕ್ತರಾದವರು, ಸಫಾಯಿ ಕರ್ಮಚಾರಿಗಳುಗಳು, ದೌರ್ಜನ್ಯಕ್ಕೊಳಗಾದವರು, ಹಾನಿಗೊಳಗಾದವರು, ಅಲೆಮಾರಿ ಜನಾಂಗದವರು, ಮತೀಯ ಗಲಭೆ ಹಾಗೂ ಚಳುವಳಿಗಳಿಂದ ವಿಶೇಷ ವೃತ್ತಿಪರ ಗುಂಪುಗಳಾದ ವಿಶೇಷ ವರ್ಗದವರನ್ನು ಗುರುತಿಸಿ ಸಮೀಕ್ಷೆ ಮಾಡಿ ನಿವೇಶನ ಇಲ್ಲದವರಿಗೆ ಭೂಮಿ ಮಂಜೂರಿ ಮಾಡಿ ನಿವೇಶನ ಮಂಜೂರಿ ಮಾಡಿ ನಿವೇಶನ ಹಂಚಿಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಸವರಾಜ ಹೊಸೂರು, ವೆಂಕಟೇಶ ಭಂಡಾರಿ, ಜನಾರ್ಧನ ’ಹಳ್ಳಿಬೆಂಚಿ, ನಾಗರಾಜ, ನರಸಿಂಹಲು ರಾಜಶೇಖರ, ಪವನ,ತಯಾರಾಜ್ ಸೇರಿದಂತೆ ಉಪಸ್ಥಿತರಿದ್ದರು.