ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಮಾ.5:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಲೂರನಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳ ಜ್ಞಾನ ವೇದಿಕೆ ಉದ್ಘಾಟನೆಯನ್ನು ಮಾಡಿದ ಗ್ರಾ.ಪಂ. ಮದರಗಾಂವ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಪ್ರಸ್ತೂತ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಯನ್ನು ಬೆಳಸಿಕೊಳ್ಳಲು ಕರೆ ನೀಡಿದರು ಕಾರ್ಯಕ್ರಮದಲ್ಲಿ ಮದರಗಾಂವ ಉಪಾಧ್ಯಕ್ಷರು ಮಾತಾಡಿ ಶಿಕ್ಷಣವು ಪ್ರತಿಯೊಬ್ಬ ಪ್ರತಿಯೊಬ್ಬ ಮಗುವಿನ ಹಕ್ಕು ಯಾವ ಮಗುವು ಶಿಕ್ಷಣದಿಂದ ವಂಚಿತರಾಗ ಬಾರದೆಂದು ಸಲಹೆ ನೀಡಿದರು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು ಮಾತಾಡಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ನುಡಿಗಳನ್ನು ಹೆಳಿದರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು ಭಾಯಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸ್ವರ್ಧೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾಥಿಗಳಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು ಕಾರ್ಯಕ್ರಮವನ್ನು ಶ್ರೀ ರಾಮಚಂದ್ರ ಸ.ಶಿ. ನಿರುಪಿಸಿ ಹಾಗೂ ಇಂದ್ರಕಾತ ಟಿ.ಜಿ.ಟಿ. ಸ್ವಾಗತಿಸಿದರು ಹಾಗೇ ಬಸಪ್ಪಾ ದೇವಣಿ ಸ.ಶಿ ಎಲ್ಲರನ್ನು ಸನ್ಮಾನಿಸಿದರು ಮತ್ತು ಕಾರ್ಯಕ್ರಮದ ವಂದನಾರ್ಪಣೆ ಯನ್ನು ಶ್ರೀ ಮಲ್ಲಿಕಾರ್ಜುನ ಜಿ.ಪಿ.ಟಿ. ನೇರವೇರಿಸಿದರು ಹಾಗೇ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಶ್ರೀ ಶಿವರಾಜ ಮೋಳಕೇರಾ ಗ್ರಾ.ಪಂ ಅಧ್ಯಕ್ಷರು. ಮದರಗಾಂವ ಶ್ರೀಮತಿ ಮಲ್ಲಮ್ಮ ಮಾರುತಿ ಮೇತ್ರೆ ಗ್ರಾ.ಪಂ ಉಪಾಧ್ಯಕ್ಷರು. ಮದರಗಾಂವ ಶ್ರೀ ಅಶೋಕ ಚಾಮರೆಡ್ಡಿ ಗ್ರಾ.ಪಂ ಸದಸ್ಯರು . ಶ್ರೀ ಚಂದ್ರಶೇಖರ ಪಾಟೀಲ ಗ್ರಾ.ಪಂ ಸದಸ್ಯರು ಶ್ರೀ ಉಷಾ ಸಂಗ್ರಾಮ್ ಗ್ರಾ.ಪಂ ಸದಸ್ಯರು ಶ್ರೀ ರಾಜಕುಮಾರ ಪರೀಟ ಎಸ್.ಡಿ.ಎಂ.ಸಿ ಅಧ್ಯಕ್ಷರು ಅಲ್ಲೂರ ಶ್ರೀಮತಿ ಜನಾಬಾಯಿ ಅನೀಲಕುಮಾರ ಉಪಾ ಎಸ್.ಡಿ.ಎಂ.ಸಿ ಉಪಾ ಧ್ಯಕ್ಷರು ಸರ್ವಸದಸ್ಯರು ಎಸ್.ಡಿ.ಎಂ.ಸಿ ಸಮಿತಿ ಶ್ರೀ ಅಣೆಪ್ಪಾ ಎಸ್ ಮುಖ್ಯಗುರುಗಳು ಅಲ್ಲೂರ ವಿವಿಧ ಶಾಲೆಯ ಮುಖ್ಯಗುರುಗಳು ಸಹ ಶಿಕ್ಷಕರು ಹಾಊ ಗ್ರಾಮದ ವಿವಿಧ ಮುಖಂಡರು ಸಮಸ್ತ ಗ್ರಾಮಸ್ಥರು ಭಾಗವಹಿಸಿದರು.