ಸರಕಾರಿ ಶಾಲೆ 2 ಕೋಣೆಗಳು ಹಾಗೂ ವಿವಿಧ ಕಾಮಗಾರಿ ಉದ್ಘಾಟನೆ

ಕಲಬುರಗಿ:ಜೂ.26: ಸಮೀಪದ ಕೋಟನೂರ ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿರುವ 2 ನೂತನ ಕೋಣೆಗಳನ್ನು ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದಿನೇಶ ದೊಡ್ಡಮನಿ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಡಾ. ಅಂಬೇಡ್ಕರ್‍ರವರ ಸಾಂಚಿ ದ್ವಾರ, ಗ್ರಂಥಾಲಯ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಾಗೇಂದ್ರ ಶೇರಿಕಾರ, ಶಿವರಾಜ ಸಿರಸಗಿ, ಮಹಾದೇವಪ್ಪ ಪೂಜಾರಿ, ಕಲ್ಯಾಣಿ ಹಂಗರಗಿ, ಶಿವರಾಣಪ್ಪ ಫರತಾಬಾದ, ರವಿ ವಿಭೂತಿ, ದಿನೇಶ ದೊಡ್ಡಮನಿ, ಬಾಬು ಮೌರ್ಯ, ಸೂರ್ಯಕಾಂತ ಹೊನ್ನ ಕಿರಣಗಿ, ಪ್ರದೀಪ ಚಿಂಚನ್ಸೂರ, ಪ್ರಶಾಂತ ನಂದಿಕೂರ, ಭೀಮಾಶಂಕರ, ಸಲೀಂ ಕೋಟನೂರ, ಶ್ರೀಕಾಂತ ಮಳ್ಳಿ, ಬಿ.ಆರ್. ಸೂರ್ಯಕಾಂತ ನಂದಿಕೂರ, ಭೀಮಾಶಂಕರ ನಾಗನಳ್ಳಿ ಡಿಜಿಟಲ್ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.