ಸರಕಾರಿ ಶಾಲೆ ಸ್ಥಾಪನೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

(ಸಂಜೆವಾಣಿ ವಾರ್ತೆ)
ನವಲಗುಂದ,ಆ12 : ” ಇನ್ನು ಐದು ತಿಂಗಳು ಕಳೆದರೆ, ಶಾಲೆ ಸ್ಥಾಪನೆಯಾಗಿ 150 ವರ್ಷ ವಾಗುತ್ತದೆ. ಸರ್ವರೂ ಸೇರಿ ಸ್ಥಾಪನೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು” ಎಂದು ಸಿದ್ಧಲಿಂಗೇಶ ಹಂಡಿಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಎಸ್.ಡಿ.ಎಂ.ಸಿ. ಯ ಅಧ್ಯಕ್ಷರ ಹಾಗೂ ತೆರವಾದ ಸದಸ್ಯರ ಆಯ್ಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ” ಶಾಲಾ ಅಭಿವೃದ್ಧಿ ಸಮಿತಿಯ ಕರ್ತವ್ಯಗಳು ಅಭಿವೃದ್ಧಿ ದೃಷ್ಟಿಕೋನವನ್ನು ಹೊಂದಿವೆ ” ಎಂದರು.
ಪ್ರಧಾನ ಗುರುಗಳಾದ ಎಸ್. ಎಂ. ಬೆಂಚಿಕೇರಿ ಅಧ್ಯಕ್ಷತೆ ವಹಿಸಿ, ಮಾತನಾಡಿ ” ಸರಕಾರಿ ಶಾಲೆಗಳ ಸಬಲೀಕರಣ ಮಾಡುವಲ್ಲಿ ಪಾಲಕರ, ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ ” ಎಂದರು.
ಇದಕ್ಕೂ ಮೊದಲು ಎಸ್ ಡಿಎಂಸಿ ಸದಸ್ಯರು ನೂತನ ಅಧ್ಯಕ್ಷರಾಗಿ ಈರಪ್ಪ ಅರ್ಜುನಪ್ಪ ಬೆಂಡಿಗೇರಿ ಹಾಗೂ .ನೂತನ ಸದಸ್ಯರಾಗಿ ಆಯ್ಕೆಯಾದವರು: ಮಾರುತಿ ಜಾಲಗಾರ, ಗಿರೀಶ ಗುಂಡಪ್ಪನವರ,ದಾದಾ ಕಲಂದರ ಜಿಗಳೂರ,ಶ್ರೀಮತಿ ವನಜಾಕ್ಷಿ ನಾವಳ್ಳಿ, ಸುಜಾತಾ ಭೋವಿ,ವನಿತಾ ಹೊಸಳ್ಳಿ,ಮಮತಾಜ ಬೇಪಾರಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

ಶಿಕ್ಷಕಿ ಶ್ರೀಮತಿ ವೇದವತಿ ದಂಡಿಗೆದಾಸರ, ಶ್ರೀನಿವಾಸ ನವೀಂದ್ರಕರ, ಎಚ್. ಎಚ್. ಬೈರೆಕದಾರ ಇತರರು ಉಪಸ್ಥಿತರಿದ್ದರು