ಸರಕಾರಿ ಶಾಲೆ ಮೇಲ್ಚಾವಣಿ ಶಿಥಿಲ

ಗಬ್ಬೂರು,ಫೆ.೨೫- ಶಿಥಿಲಗೊಂಡಿರೋ ಕಟ್ಟಡ, ಬಣ್ಣ ಮಾಸಿರೋ ಗೋಡೆ,ಕಿತ್ತು ಹೋಗಿರೋ ನೇಲ,ಅರ್ಧ ಮುರಿದಿರೋ ಶಾಲೆಯ ಬೋರ್ಡ್,ದೂರದಿಂದ ನೋಡಿದರೆ ಥೇಟ್ ಪಾಳು ಬಂಗಲೇ ಆದ್ರೆ ಇಂಥಾದೊಂದು ದುಸ್ಥತಿಯಲ್ಲಿರೋ ಕಟ್ಟಡ ಎಡೆದೊರೆ ನಾಡು ಎಂದೇ ಹೆಸರಾಗಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನಗರಗುಂಡ ಸರಕಾರಿ ಹಿರಿಯ ಪ್ರಾಥಮಿಕ ಅಂದ್ರೆ ನಂಬಲೇಬೇಕು ದೇವದುರ್ಗ ತಾಲೂಕಿನ ದಂಡಂಬಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಗರಗುಂಡ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ದಾರುಣ ಸ್ಥಿತಿ ಇದು.
ಈ ಸರಕಾರಿ ಶಾಲೆಯಲ್ಲಿ ಏನಿಲ್ಲ ಅಂತ ಕೇಳೋದಕ್ಕಿಂತ್ಲೂ ಏನಿದೆ ಅಂತ ಕೇಳಿದ್ರೆ ಸರಿ ಹೋಗುತ್ತೇನೋ. ಮೂಲಸೌಕರ್ಯ ಕೊರತೆ ಇಲ್ಲಿ ಓದುತ್ತಿರೋ ಬಡ ವಿದ್ಯಾರ್ಥಿಗಳನ್ನ ಕಾಡ್ತಿದೆ.ಶಾಲೆಯಲ್ಲಿ ೨೪೫ಕ್ಕೂ ಹೆಚ್ಚು ಮಕ್ಕಳಿದ್ದು ಪಾಠ ಮಾಡೋಕೆ ಇರೋದು ಕೇವಲ ನಾಲ್ಕು, ಐದು ಶಿಕ್ಷಕರು ಮಾತ್ರ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ.ಮಕ್ಕಳಿಗೆ ಶಾಲೆಯಲ್ಲಿ ಶೌಚಾಲಯದ ಸಮಸ್ಯೆಯು ಇದೆ. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲ.ಡೆಸ್ಕ್, ಬೆಂಚ್ ಇಲ್ಲದೆ ಮಕ್ಕಳು ನೆಲದಲ್ಲೇ ಕೂರಬೇಕಾದ ಸ್ಥಿತಿ.ಕ್ರೀಡಾ ಉಪಕರಣಗಳು ಇಲ್ಲ ಅನ್ನೋ ಆರೋಪ ಗ್ರಾಮಸ್ಥರದ್ದು.
ಸರ್ಕಾರ ಸರಕಾರಿ ಶಾಲೆಗಳ ಉದ್ಧಾರಕ್ಕೆ ಅಷ್ಟೊಂದು ದುಡ್ಡು ಮಾಡುತ್ತೆ,ನಮ್ಮೂರ ಶಾಲೆ ಮಾತ್ರ ಯಾಕೆ ಹಿಂಗಿದೆ ಅಂತ ಮುಖ್ಯೋಪಾಧ್ಯಾಪಕಿಯಾದ ರಾಜಶ್ರೀ ಅವರನ್ನು ಪ್ರಶ್ನೆ ಮಾಡಿದ್ದಾರೆ ಗ್ರಾಮಸ್ಥರು.
ಶಾಸಕ ಶಿವನಗೌಡ ನಾಯಕ ಅವ್ರೇ ಇದು ನಿಮ್ಮ ಗಮನಕ್ ಬಂದಿಲ್ವಾ..?:ದೇವದುರ್ಗ ತಾಲ್ಲೂಕು ಬಿಜೆಪಿ ಎಂಎಲ್‌ಎ ಕೆ.ಶಿವನಗೌಡ ನಾಯಕ ಅವರ ಕ್ಷೇತ್ರ.ಆದ್ರೆ ಅವ್ರದ್ದೇ ಕ್ಷೇತ್ರದಲ್ಲಿ ಸರಕಾರಿ ಕನ್ನಡ ಶಾಲೆಯೊಂದು ಇಂಥಾ ಸುಸ್ಥಿತಿಗೆ ತಲುಪಿರೋದು ಬಹುಶಃ ಶಾಸಕರ ಗಮನಕ್ಕೆ ಬಂದಿಲ್ವೇನೋ? ಅಥವಾ ಕಣ್ಣಿದ್ದು ಕುರುಡರಾಗಿದ್ದಾರೋ? ಕ್ಷೇತ್ರಶಿಕ್ಷಣಾಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು,ತಾಲ್ಲೂಕು ಪಂಚಾಯತ್,ಜಿಲ್ಲಾ ಪಂಚಾಯತ್ ಅಧಿಕಾರಿಗಳು ಅದೆಲ್ಲಿ ನಿದ್ದೆಯಲ್ಲಿದ್ದಾರೋ? ಎಲ್ಲರೂ ಮನಸ್ಸು ಮಾಡಿದ್ರೆ ತಾನೇ ಕನ್ನಡ ಶಾಲೆಯ ಉಳಿವು.ಕನ್ನಡ ಶಾಲೆಗೆ ಮಕ್ಕಳನ್ನ ಕಳುಹಿಸಿ, ಸರಕಾರ ಶಾಲೆಯನ್ನು ಉಳಿಸಿ ಅಂತ ಹೇಳೋ ಸರ್ಕಾರ ಎಂದು ರುದ್ರಸ್ವಾಮಿ, ಶಿವನಗೌಡ, ಹನುಮಂತ ನಾಯಕ, ಭೀಮಣ್ಣ ನಾಯಕ, ಸಿ.ಆರ್.ನಾಯಕ ಆರೋಪಿಸಿದ್ದಾರೆ.