ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ; ಹಾವರಗಿ

ಬಾದಾಮಿ,ಮಾ.18: ತಾಲೂಕಿನ ಬೆಳವಲಕೊಪ್ಪದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 1 ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ರಾಗಿ ಮಾಲ್ಟ್ ವಿತರಣೆಯ ಉದ್ಘಾಟಣೆ ಸಮಾರಂಭ ನಡೆಯಿತು. ಪ್ರೌಢಶಾಲೆಯ ಸಹಶಿಕ್ಷಕ ವೈ.ವೈ.ಹಾವರಗಿ ಇವರು ಮಕ್ಕಳಿಗೆ ರಾಗಿ ಮಾಲ್ಟ್ ಕುಡಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಬಡಮಕ್ಕಳಾಗಿರುತ್ತಾರೆ. ಅವರು ಶಿಕ್ಷಣದಿಂದ ವಂಚಿತರಾಗಬಾರದು. ಬಡತನದ ಕಾರಣದಿಂದ ಶಾಲೆಯನ್ನು ಬಿಡುವ ಸಂದರ್ಭ ಇರುತ್ತದೆ ಆದ್ದರಿಂದ ಅಂತಹ ಮಕ್ಕಳೂ ಕೊಡಾ ಶಾಲೆಯನ್ನು ಬಿಡಬಾರದು ಎನ್ನುವದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು. ಮುಂದುವರೆದು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಬೇಕು ಎಂದು ಕರೆ ನೀಡಿದರು
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಎಸ್.ಎಸ್. ಲಿಂಗರಡ್ಡಿ, ಉಪಾಧ್ಯಕ ಮಹಾಂತೇಶ ಹೊಸಮಠ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ರೇಣುಕಾ ಕಾಮಣ್ಣ ಪೂಜಾರಿ, ಎಸ್.ಡಿ.ಎಮ್.ಸಿ. ಸದಸ್ಯರಾದ ವಾಸು ಭಾವಿ ಹಾಗೂ ದ್ಯಾಮಣ್ಣ ಅನವಾಲ ಹಾಗೂ ಗ್ರಾ.ಪಂ.ಸದಸ್ಯೆ ಜಯಶ್ರೀ ಸಂಕದಾಳ ಮತ್ತು ಸದಸ್ಯ ಬಸವರಾಜ ಅಬ್ಬಿಗೇರಿ ಇನ್ನೂ ಅನೇಕ ಪಾಲಕರು ಪಾಲ್ಗೋಂಡಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು. ರಮೇಶ ಕೊಂತಿಕಲ್ ಸ್ವಾಗತಿಸಿದರು. ಬಿ.ಟಿ. ಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಆರ್.ವಾಯ್. ದೇವರಡ್ಡಿ ವಂ