ಸರಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ

ಸಿರವಾರ,ಮಾ.ಂ೨- ಖಾಸಗಿ ಶಾಲೆ, ಅಲಿ ಭೋದಿಸುವ ಪಾಠ ಶ್ರೇಷ್ಠ, ಸರ್ಕಾರಿ ಶಾಲೆ, ಅಲಿನ ಕಲಿಕಾ ಗುಣಮಟ್ಟ ಕನಿಷ್ಠ ಎಂದೂ ಯಾರು ಸಹ ನಿರ್ಲಕ್ಷ ಭಾವನೆ ತೋರುಹುದು ಬೇಡ. ಉನ್ನತ ಅಧಿಕಾರಿಗಳು ಇಂತಹ ಸರ್ಕಾರಿ ಶಾಲೆಯಲ್ಲಿಯೆ ಅಭ್ಯಾಸ ಮಾಡಿದ್ದಾರೆ ಎಂದು ಜೆ.ಡಿಎಸ್ ಹಿರಿಯ ಮುಖಂಡ ಜಿ.ಲೋಕರೇಡ್ಡಿ ಹೇಳಿದರು.
ಪಟ್ಟಣದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ, ಸನ್ಮಾನ ಸಮಾರಂಭ ಹಾಗೂ ೭ ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳು ದೇಶದ ಭವಿಷ್ಯವನ್ನು ರೂಪಿಸುವ ದೇವಾಲಯಗಳಾಗಿವೆ. ದೇಶದ ಭವಿಷ್ಯವು ಸರಕಾರಿ ಶಾಲೆಯ ಮಕ್ಕಳ ಭವಿಷ್ಯದ ಮೇಲೆ ನಿಂತಿದೆ. ದೇಶದಲ್ಲಿ ದೊಡ್ಡ ದೊಡ್ಡ ಅಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಇಂತಹ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ.
ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ. ಸರಕಾರಿ ಶಾಲೆಗಾಗಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತಾ ಇದೆ ಎಂದರು. ಸಿ.ಪ.ಸ.ಸಂಘದ ಅಧ್ಯಕ್ಷ ಎನ್.ಉದಯಕುಮಾರ ಮಾತನಾಡಿ ದೇಶದ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರವು ಅನೇಕ ರೀತಿಯ ಕಲಿಕ ಹಬ್ಬ, ಕಲಿಕಾ ಚೇತರಿಕೆ ಇನ್ನೂ ಅನೇಕ ರೀತಿಯ ಕಾರ್ಯಕ್ರಮಗಳು ಸರ್ಕಾರವು ರೂಪಿಸುತ್ತಿವೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಸರಕಾರಿ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬ ವಿಧ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲಿ ಬೆಳೆದು ದೊಡ್ಡ ದೊಡ್ಡ ಅಧಿಕಾರಿಗಳಾಗಿ ಸಿರವಾರ ಪಟ್ಟಣಕ್ಕೆ ಕೀರ್ತಿ ತರುವ ಜ್ಯೋತಿ ನೀವಾಗಿ ಎಂದರು.
ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ಅಯ್ಯನಗೌಡ ಐರೇಡ್ಡಿ ಮಾತನಾಡಿ ಸಿರವಾರದವರು ಜಿಲ್ಲೆ, ರಾಜ್ಯ, ದೇಶ ವಿದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದಾರೆಂದರೆ ಅವರೆಲ್ಲ ಈ ಶಾಲೆಯಲ್ಲಿಯೇ ಕಲಿತವರಾಗಿದ್ದಾರೆ. ನಾವು ಸಹ ಇ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಸಹ ಮಕ್ಕಳನ್ನು ತಮ್ಮ ಮಕ್ಕಳೆಂದು ತಿಳಿದು ಅಭ್ಯಾಸ ಮಾಡಿಸಬೇಕು ಎಂದರು.
ಪಟ್ಟಣದ ಅನೇಕ ಮುಖಂಡರು ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ ಶಾಲಾ ಮಕ್ಕಳಿಂದ ನಾಟಕ, ನೃತ್ಯ ಪ್ರದರ್ಶನ, ಸಾಮಾಜಿಕ ಸಂಸ್ಕೃತಿ ಕಾರ್ಯಕ್ರಮಗಳು ನಡೆಸಲಾಯಿತು.
ಈ ಸಂದರ್ಭದಲ್ಲಿ ಮು.ಗು ಇಸ್ಮಾಯಿಲ್, ಪ.ಪಂ ಸದಸ್ಯರಾದ ಕೃಷ್ಣ ನಾಯಕ, ಸೂರಿ ದುರುಗಣ್ಣ ನಾಯಕ, ಎಂ.ಡಿ.ಮೌಲಸಾಬ್ ವರ್ಚಸ್, ಅಜಿತ್ ಕುಮಾರ್ ಹೊನ್ನಟಿಗಿ,ಚನ್ನಪ್ಪ ಗಡ್ಲ, ಎಚ್. ಮಾರ್ಕಪ್ಪ ಮಲ್ಲಪ್ಪ ದೊಡ್ಮನೆ, ಗ್ಯಾನಪ್ಪ ಸೂಜಪ್ಪ, ವಿನಯಕುಮಾರ್, ಹಸೇನಿ ಅಲಿ ಸಾಬ್,ಅಮರೇಶ ಗಡ್ಲ, ಬಂದೇನಾವಾಜ್, ನಾಗರಾಜ್, ನಾಮನಿರ್ಧೇಶಕ ಜೆ.ಬಸವನಗೌಡ, ನಾಗರಾಜ ಗೌಡ, ಎಚ್.ಕೆ.ಅಮರೇಶ, ನವಲಕಲ್ ಶಾಲೆ ಶಿಕ್ಷಕಿ ಲಕ್ಷ್ಮೀ ಗುಂಡಪ್ಪ, ವಿಧ್ಯಾನಗರ ಶಾಲಾ ಮು.ಗು. ನರಸಪ್ಪ, ಕೆ.ರಾಘವೇಂದ್ರ ಖಾಜನಗೌಡ, ಚಂದ್ರಶೇಖರ್ ಯಲ್ಲೇರಿ, ಪಾರ್ಥ, ಎಚ್.ಕೆ.ಕರಿಯಪ್ಪ, ವಿಜ್ಜು ಎನ್.ಎಂ.ಪಿ, ಸುಂದರ್, ದೇವರಾಜ ಜಡೇಜಾ, ಎಚ್.ಡಿ.ದೇವರಾಜ, ಸುನಿಲ್ ಕುಮಾರ್, ಡೇವಿಡ್, ಮಾನಶಪ್ಪ, ಮಧು, ರವಿಕುಮಾರ್, ಅಮಾರ್, ಶಾಲೆಯ ಸಹ ಶಿಕ್ಷಕರಾದ ಮಹೇಶ್, ಉಮೇಶಪ್ಪ, ನಾಗರತ್ನ, ಲಲಿತಾ, ಶಕುಂತಲಾ, ದೀಪಾ, ಶೈಲಜಾ, ಸೀತಮ್ಮ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.