ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಾಗಲಿ: ರವಿ ಲಮಾಣಿ

ವಿಜಯಪುರ, ನ.17- ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಯಾರೂ ನೀಡಲಾಗದ ಸಂಸ್ಕಾರವನ್ನು ಧಾರೆ ಎರೆಯುವ ಜ್ಞಾನ ದೇಗುಲ, ಸರಕಾರಿ ಶಾಲೆಗಳನ್ನು ಉಳಿಸಿ ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲ ನಾಗರಿಕರ ಹೊಣೆಗಾರಿಕೆಯಾಗಿದೆ ಎಂದು ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ಯುವ ಘಟಕದ ಜಿಲ್ಲಾಧ್ಯಕ್ಷ ರವಿ ಲಮಾಣಿ ಅವರು ಹೇಳಿದರು.
ತಾಲೂಕಿನ ಮಖಣಾಪೂರ ತಾಂಡಾ 1ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಸಾಧಕರ ಭಾವಚಿತ್ರ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಗಳ ಪೈಪೂಟಿಯಲ್ಲಿ ಸರಕಾರಿ ಶಾಲೆಗಳನ್ನು ನಾವೆಲ್ಲರು ಕಡೆಗಣಿಸುತ್ತಿದ್ದು, ಅವುಗಳ ಜಿರ್ಣೋದ್ಧಾರವನ್ನು ನಾವೆಲ್ಲರು ಮಾಡಬೇಕಿದೆ. ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ ಎನ್ನುವಂತೆ ತೋರಿಸಬೇಕಿದೆ. ಶಾಲೆಯ ಹಳೆಯ ವಿಧ್ಯಾರ್ಥಿಗಳ ತಮ್ಮ ಶಾಲೆಗೆ ತಮ್ಮದೆಯಾದ ಕೊಡುಗೆಗಳನ್ನು ನೀಡಿದಲ್ಲಿ ಮಾತ್ರ ಇಂತಹ ಬೆಳವಣಿಗೆಗಳು ಆಗಲು ಸಾಧ್ಯ ಎಂದು ಹೇಳಿದರು.
ಮಕ್ಕಳು ಮನೆ ಮನವನ್ನು ಬೆಳಗುವ ನಂದಾದೀಪವಾಗಿದ್ದು. ಅವರಿಗೆ ಪಾಲಕರು, ಶಿಕ್ಷಕರು ಉತ್ತಮ ವಿದ್ಯೆ ವಿನಯ ಸಂಸ್ಕಾರ ಸಂಸ್ಕøತಿ ನೀಡಿ ಬೆಳೆಸಬೇಕು. ಅವರಿಗೆ ದೇಶದಲ್ಲಿನ ಮಹಾನ್ ಸಾಧಕರ ಬಗ್ಗೆ ತಿಳಿಹೇಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ದೇಶಕ್ಕಾಗಿ ನಾವೇನು ಕೊಟ್ಟಿದ್ದೇವೆ ಎನ್ನುವುದನ್ನು ನಾವು ಆತ್ಮಾವಲೋಕನ ಮಾಡಿಕೊಂಡು ದೇಶಕ್ಕೆ ಏನಾದರು ಕೊಡುಗೆ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಆದ್ದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಕೂಡಾ ಆಗಿದೆ ಎಂದು ಹೇಳಿದರು.
ಮಹಾನ್ ಸಾಧಕರ ಭಾವಚಿತ್ರಗಳು ಶಾಲೆಗಳಲ್ಲಿ ಇದ್ದಲ್ಲಿ ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ವಿಧ್ಯಾರ್ಥಿಗಳು ಮಾಡುತ್ತಾರೆ. ಶಿಕ್ಷಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಜೀವನ ಚರಿತ್ರಗಳಲ್ಲಿ ಹಾಗೂ ಅವರು ಬೇಳೆದು ಮಾಡಿದ ಸಾಧನೆಗಳನ್ನು ವಿದ್ಯಾರ್ಥಿಗಳ್ಲಿ ತಿಳಿಸುವ ಪ್ರಯತ್ನದಿಂದ ಅವರಲ್ಲಿ ಸಾಧಿಸುವ ಛಲ ಹುಟ್ಟುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯರಾದ ಆರ್.ಎ ಮುಲ್ಲಾ ಶಿಕ್ಷಕರಾದ ಬಾಗವಾನ, ವಿ.ಪಿ ಅವತಾಡೆ, ಶ್ರೀಮತಿ ಭಜಂತ್ರಿ, ಶ್ರೀಮತಿ ದೊಡಮನಿ, ಶ್ರೀಮತಿ ತೊರವಿ ಹಾಗೂ ಊರಿನ ಮುಖಂಡರಾದ ಸಂತೋಷ ರಾಠೋಡ, ಶ್ರೀನಿವಾಸ ಪವಾರ, ಅವಿನಾಶ ಪವಾರ, ಪ್ರವೀಣ ರಾಠೋಡ, ವಿಜಯ ಚೌಹಾಣ, ಅಪ್ಪು ರಾಠೋಡ, ಸಚಿನ ಚೌಹಾಣ ಸೇರಿದಂತೆ ಅನೇಕರು ಇದ್ದರು.