ಸರಕಾರಿ ಮಹಾವಿದ್ಯಾಲಯದಲ್ಲಿ ನೂತನ ಪ್ರಯೋಗಾಲಯ ಉದ್ಘಾಟಿಸಿದ ಶಾಸಕ ಎಂ.ವೈ

ಅಫಜಲಪುರ: ಜು.18:ದೇಶವು ಎಲ್ಲ ರಂಗದಲ್ಲಿ ತಂತ್ರಜ್ಞಾನ ಅವಳಡಿಕೆಯಾಗುತ್ತಿದೆ ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.

ಅಫಜಲಪುರ ಪಟ್ಟಣದ ಸರ್ಕಾರಿ ಮಹಾವಿದ್ಯಾಯಲದಲ್ಲಿ ನೂತನ ಗಣಕ ವಿಜ್ಞಾನ ವಿಭಾಗದ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ವರ್ಷದಿಂದ ವರ್ಷಕ್ಕೆ ಅಫಜಲಪುರ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿದೆ ಹೀಗಾಗಿ ತಾಲೂಕಿನ ಸರಕಾರಿ ಕಾಲೇಜುಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಸಿಗುವಂತಾಗಿದೆ. ಆ ನಿಟ್ಟಿನಲ್ಲಿ ಕಾಲೇಜಿನ ಅಭಿವೃದ್ಧಿಗೆ ನನ್ನ ಸಹಕಾರ ಇರಲಿದೆ ಸಿಬ್ಬಂದಿಗಳು ಕಾಲೇಜಿನ ಬೆಳವಣಿಗೆಗೆ ಶ್ರಮಿಸಬೇಕು ಎಂದ ಅವರು ಇನ್ನೂ ಕಾಲೇಜಿನ ಗ್ರಂಥಾಲಯ ವಿಕ್ಷಿಸಿ ಗ್ರಂಥಾಲಯ ಕಟ್ಟಡ ಸಣ್ಣದಾಗಿರುವುದರಿಂದ ಸ್ವತಂತ್ರ ಕಟ್ಟಡ ನಿರ್ಮಿಸಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುವುದು ಎಂದರು.

ಬಳಿಕ ಕಾಲೇಜು ಅಭಿವೃದ್ದಿ ಸಮಿತಿ ಸಭೆ ಸಮಿತಿ ಅಧ್ಯಕ್ಷ ಶಾಸಕ ಎಂ.ವೈ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಾಂಶುಪಾಲ ಸಂತೋಷ ಹುಗ್ಗಿ ಅವರು ಮಾತನಾಡಿ ಕಾಲೇಜಿಗೆ ಸಂಬಂಧಿಸಿದ ಕೆಲವು ಸೌಕರ್ಯಗಳ ಪೂರೈಕೆ, ಪಿಜಿ ಕೋರ್ಸ್ ಆರಂಭ, ನೈಟ್ ವಾಚಮನ್ ನೇಮಕ, ಭೌತ, ರಸಾಯನ, ಗಣಿತ ಶಾಸ್ತ್ರದ ಪ್ರಯೋಗಲಾಯಗಳ ಸ್ಥಾಪನೆ, ಸಹಾಯಕ ಗ್ರಂಥ ಪಾಲಕರ ನೇಮಕ, ಕಾಲೇಜಿನ ಸಮವಸ್ತ್ರ, ಹಳೆಯ ದಾಸ್ತಾನುಗಳ ವಿಲೇವಾರಿ ಕುರಿತು ಚರ್ಚಿಸಿ ಅನುಮೋದನೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಕಾಶ ಜಮಾದಾರ, ಶಾಂತು ದೇಸಾಯಿ, ಲತೀಪ್ ಪಟೇಲ್, ಸಿದ್ದಾರ್ಥ ಬಸರಿಗಿಡ, ಲಿಂಗರಾಜ ಅತನೂರೆ, ಮಹಾನಿಂಗ ಅಂಗಡಿ, ಕರ್ಜಗಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಶರಣಬಸಪ್ಪ ಅವಟೆ, ಉಪನ್ಯಾಸಕರಾದ ಡಾ. ರಾಜೇಶ್ವರಿ, ಡಾ. ಸೂಗುರೇಶ್ವರ, ಡಾ. ದತ್ತಾತ್ರೇಯ ಹೆಚ್, ಡಾ. ಸಾವಿತ್ರಿ ಕೃಷ್ಣ, ಖುತೇಜಾ ನಸ್ರೀನ್, ಶ್ರೀದೇವಿ ರಾಠೋಡ, ವಿನಾಯಕ ಸೇರಿದಂತೆ ವಿದ್ಯಾರ್ಥಿಗಳು ಇದ್ದರು