
(ಸಂಜೆ ವಾಣಿ ವಾರ್ತೆ)
ಭಾಲ್ಕಿ :ಮಾ.28: ತಾಲೂಕಿನ ಸರಕಾರಿ ಪ್ರೌಢಶಾಲೆ ಭಾಟಸಾಂಗವಿಯಲ್ಲಿ ಹತ್ತನೇ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷ ಸ್ಥಾನವನ್ನು ಮೆಥಿಮೇಳಕುಂದಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರದ ಪಾಟೀಲ್ ವಹಿಸಿಕೊಂಡಿದ್ದರು.
ಮುಖ್ಯ ಗುರುಗಳಾದ ಬಬನ ಬಿರಾದರ್ ಅವರು ಮಾತನಾಡಿ ಪರೀಕ್ಷೆ ಭಯ ಬೇಡ, ಮಾನಸಿಕ ಒತ್ತಡಕ್ಕೆ ಒಳಗಾಗದೆ, ಸನ್ನದ್ಧರಾಗಿ ಪರೀಕ್ಷೆ ಬಿಡಿಸಬೇಕು. ಮಕ್ಕಳು ಶಿಕ್ಷಣ ಜೊತೆ ಒಳ್ಳೆ ಸಂಸ್ಕಾರ ಕಲಿತುಕೊಂಡು ಸಮಾಜದಲ್ಲಿ ಒಳ್ಳೆ ಹೆಸರು ಗಳಿಸಬೇಕು. ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗಿ ಸಮಾಜ ನಿರ್ಮಾಣ ಮಾಡುವ ಶಕ್ತಿ ನಿಮಗಿದೆ. ಅದಕ್ಕಾಗಿ ಶಿಕ್ಷಣ ಮಹತ್ವ ಬಹಳಷ್ಟಿದೆ. ಒಳ್ಳೆಯ ವಿದ್ಯಾಭ್ಯಾಸ ಪಡೆದು ಇಂಜಿನಿಯರ್, ಡಾಕ್ಟರ್, ಅಧಿಕಾರಿಗಳಾಗಿ ಸಮಾಜದ ಉತ್ತಮ ಕಾರ್ಯ ನಿರ್ವಹಿಸುವ ಶಕ್ತಿ ನಿಮಗೆ ಬರಬೇಕು. ಎಂದು ಮಾರ್ಗದರ್ಶನ ನೀಡಿದರು.
.ಎಸ್. ಎಸ್. ಬಿ ಪ್ರೌಢ ಶಾಲೆ ಕಾಸರತುಗಾವ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಪಾಟೀಲ್ ಮಕ್ಕಳಿಗೆ ಮಾರ್ಗದರ್ಶನ ಮತ್ತು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವಿನೋದ್ ಭೋಸಲೆ, ಗ್ರಾಮ ಪಂಚಾಯತ್ ಸದಸ್ಯ ಭಗವಾನ್ ಬಿರಾದಾರ, ರವಿ ಪಾಟೀಲ್ ಶಿಕ್ಷಕರಾದ
ಸಂತೋಷ್ ಟೋಕರೆ, ಮಾರುತಿ ಸಗರ, ಶಿಕ್ಷಕ ವೃಂದದವರು ಇದ್ದರು. ಸಹ ಶಿಕ್ಷಕರಾದ ಬಾಲಾಜಿ ರಾಜುರೆ ಸರ್ ಅವರು ಮಕ್ಕಳಿಗೆ ಮಾರ್ಗದರ್ಶನ ಶಿಕ್ಷಣದ ಮಹತ್ವ ನೀಡುತ್ತಾ ನಿರೂಪಿಸಿದರು.