ಸರಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳೆಯುತ್ತಿರುವ ಯುವಾಬ್ರಿಗೇಡ್ ಕಾರ್ಯಕರ್ತರು

ಹುಮನಾಬಾದ್:ಜೂ.4: ಯುವಾಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾರ್ಗದರ್ಶನದಲ್ಲಿ ರಾಜ್ಯಾದಾದ್ಯಂತ ಯುವಾಬ್ರಿಗೇಡ್ ವತಿಯಿಂದ ಸರಕಾರಿ ಕನ್ನಡ ಶಾಲೆಗಳಿಗೆ ಬಣ್ಣ ಹಚ್ಚು ಕಾರ್ಯ ಮಾಡಲಾಗುತ್ತಿದೆ ಎಂದು ವಿಜಯಪೂರ ವಿಭಾಗೀಯ ಸಂಚಾಲಕ ಲಕ್ಷ್ಮಿಕಾಂತ್ ಹಿಂದೋಡ್ಡಿ ಹೇಳಿದರು.
ಶಾಲೆಗೆ ಬಾ ಅಣ್ಣ ಹಚ್ಚೋಣ ಒಂದಿಷ್ಟು ಬಣ್ಣ ಯೋಜನೆ ಅಡಿಯಲ್ಲಿ ತಾಲೂಕಿನ ಕಠಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಬಣ್ಣ ಹಚ್ಚುವ ವೇಳೆ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದ ಸಮಗ್ರ ಬೆಳವಣಿಗೆ ಹಾಗೂ ಸರಕಾರಿ ಶಾಲೆ ಮಕ್ಕಳಿಗೆ ಸುಂದರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸರಕಾರಿ ಕನ್ನಡ ಶಾಲೆಗಳಿಗೆ ಬಣ್ಣ ಹಚ್ಚು ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ಸಾಲಿನ ವಿದ್ಯಾರ್ಥಿಗಳು ನಿರಂತರ ಅಧ್ಯಾಯನ ಮಾಡಬೇಕು. ವರ್ಗಕೋಣೆಯಲ್ಲಿ ಬೋಧಕರು ನೀಡಿರುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಜತೆಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು. ನಮ್ಮ ಸಂಸ್ಕøತಿ ಪರಂಪರೆ ಕುರಿತು ತಿಳಿದುಕೊಂಡು ಗುರು ಹಿರಿಯರನ್ನ ಗೌರವಿಸುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಚಾಲಕ ಪ್ರಶಾಂತ ಶೇರಿಕಾರ, ತಾಲೂಕ ಸಂಚಾಲಕ ದೀಲಿಪ್ ಪಂಚಾಳ್, ಗೋಪಿ ಗುಪ್ತಾ, ನಿಲೇಶ್ ಲಾಂಡೆ, ಬಲರಾಮ ಪೆÇಲೀದಾನ, ಉದಯ ಪಂಚಾಳ, ರಾಹುಲ್ ಜಾಜಿ, ಭರತ ವಾಂಜರಿ, ಆನಂದ ರಡ್ಡಿ, ನಾಗೇಶ ಜಮಾದಾರ, ರಜನಿಕಾಂತ ಜಮಾದಾರ, ಶ್ರೀಕಾಂತ ಶ್ರೀಗನ್, ಮನೋಜ ಓಂಕಾರೆ, ಬಸವರಾಜ ಅಷ್ಟಗಿ, ಪ್ರದೀಪ ಹಣಕುಣಿ, ಪರಮೇಶ್ವರ ಹಳ್ಳಿಖೇಡ್ (ಕೆ), ಸೇರಿ ಅನೇಕರಿದ್ದರು.