ಸರಕಾರಿ ಪಿ.ಯು ಕಾಲೇಜು ಆರಂಭಿಸಲು ಶಾಸಕರಿಗೆ ಮನವಿ.

ಸಂಜೆವಾಣಿ ವಾರ್ತೆ

ಜಗಳೂರು.ಸೆ.೨೧ :- ತಾಲೂಕಿನ ಗಡಿಗ್ರಾಮ ಸೊಕ್ಕೆ ಯಲ್ಲಿ ಸರಕಾರಿ ಪಿಯು ಕಾಲೇಜು ಆರಂಭಿಸಲು ಒತ್ತಾಯಿಸಿ ಪಟ್ಟ ಣದ ಪ್ರವಾಸಿ ಮಂದಿರದಲ್ಲಿ ಗ್ರಾಮಸ್ಥರು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿಸಲ್ಲಿಸಿದರು. ಸೊಕ್ಕೆ, ಯರ್ಲಕಟ್ಟೆ, ಚಿಕ್ಕಬಂಟನಹಳ್ಳಿ,ಗೋಪಲಾಪುರ,ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಕೊಟ್ಟೂರು,ಜಗಳೂರು ಪಟ್ಟಣಗಳಿಗೆ ತೆರಳಿ ಪಿಯುಸಿ ವ್ಯಾಸಂಗ ಮಾಡುವ ಅನಿವಾರ್ಯತೆ ಎದುರಾಗಿ ದೆ.ಆದ್ದರಿಂದ ಹೋಬಳಿ ಕೇಂದ್ರವಾಗಿರುವ ಸೊಕ್ಕೆ ಗ್ರಾಮದಲ್ಲಿ ಪಿಯುಸಿ ಕಾಲೇಜು ಆರಂಭಿಸಿ ಕಲಾ,ವಾಣಿಜ್ಯ,ವಿಜ್ಞಾನ ವಿಭಾಗಗ ಳನ್ನು ತೆರೆಯಬೇಕು ಎಂದು ಮನವಿಮಾಡಿದರು. ಮನವಿ ಸ್ವೀಕರಿಸಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ಗ್ರಾಮಸ್ಥರ ಮನವಿಯಂತೆ ಅವಶ್ಯಕವಾಗಿರುವ ಸರಕಾರಿ ಪಿಯು ಕಾಲೇಜನ್ನು ಶೀಘ್ರ ಮಂಜೂರು ಮಾಡಿಸಲಾಗುವುದು.ಅಗತ್ಯವಿರುವ ಸ್ಥಳ ಪರಿಶೀಲನೆ,ಹಾಗೂ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಅವರಿಗೆ ಶಿಫಾರಸ್ಸಿಗೆ ಸೂಚಿಸಿದರು.ಕೂಡಲೇ ಸ್ಥಳ ಪರಿಶೀಲನೆ ವರದಿ ಹಾಗೂ ಪ್ರಸ್ತಾವನೆ ಸಲ್ಲಿಸ ಲಾಗುವುದು-: ವಿಜ್ಞಾನ ವಿಭಾಗ ತೆರೆಯಲು ಸರಕಾರದ ಕೆಲ ನಿಯಮಾವ ಳಿಗಳನ್ನು ಪಾಲಿಸಬೇಕು.ಇಲಾಖೆ ಮೇಲಾಧಿಕಾರಿ ಗಳ ಗಮನಕ್ಕೆ ತರಲಾಗುವುದು.ಆದರೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದುಪಿಯು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕರಿಸಿದ್ದಪ್ಪ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಎಚ್.ಟಿ.ಚಂದ್ರಶೇಖರ್, ಮುಖಂಡರಾದ ಡಾ.ಬಸವಾನಂದ,ಮಂಜಣ್ಣ,ಮೂಗಪ್ಪ, ಶಿವಣ್ಣಯರಬಳ್ಳಿ,ಬೊಮ್ಮಣ್ಣ,ಚಮಾನ್ ಸಾಬ್,ಚಿಕ್ಕ ಬಂಟನಹಳ್ಳಿ ಶಿವು,ಗೋಪಾಳಪುರ ಸುನಿಲ್,ಭರತ್ ದೊಡ್ಡಮನಿ,ಪಾಲಣ್ಣ, ಚೌಡಪ್ಪ, ಟೀಪುಸಾಬ್, ರಮೇಶ್, ಸಚಿನ್,ಮಂಜಣ್ಣಕಿತ್ತೂರು,ಸಚಿನ್ ಸೇರಿದಂತೆ ಇದ್ದರು