ಬೀದರ:ಜೂ.16:ಸ್ಥಳಿಯ ಸರ್ಕಾರಿ ಪಾಲಿಟೆಕ್ನಿಕ್ ಬೀದರ್, ಬೆಂಗಳೂರಿನ ಟೊಯೋಟಾ, ಪುಣಾದ ಫ್ಲ್ಯಾಶ್, ಹೈದರಾಬಾದನ ಡಿ.ಸಿ.ಎಂ. ಶ್ರೀರಾಮಲು ಕಂಪನಿಗಳ ಸಂಯೋಗದಲ್ಲಿ ನಿನ್ನೆ ಡಿಪೆÇ್ಲೀಮಾ ಹಾಗೂ ಐಟಿಐ ಮಕ್ಕಳಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿತ್ತು. ಸಂದರ್ಶನದಲ್ಲಿ ಒಟ್ಟು 300 ವಿವಿಧ ಕೊರ್ಸ್‍ಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಲಿಯುವಿಕೆ ಜೊತೆಗೆ ಉದ್ಯೋಗ ಕೊಡಿಸುವ ಕಾರ್ಯ ನಮ್ಮದಾಗಲಿ. ಮಕ್ಕಳ ಶಿಕ್ಷಣ ಕಲಿಸಿ ಪ್ರಮಾಣ ಪತ್ರ ಕೊಟ್ಟು ಕಳುಹಿಸುವದಕ್ಕಿಂತ ಅವರ ಕೈಗೆ ಉದ್ಯೋಗ ಪತ್ರ ಕೊಟ್ಟು ಕಳುಹಿಸಲು ನಮ್ಮ ಸಂಸ್ಥೆ ಇಂದು ಸನ್ನದ್ಧಗೊಂಡು ಕ್ಯಾಂಪಸ್ ಸಂದರ್ಶನ ನಮ್ಮ ಪ್ಲೇಸ್ಮೆಂಟ್ ಅಧಿಕಾರಿಗಳಾದ ಮಹೇಶ್ ಸ್ವಾಮಿಯವರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ಎಂದು ಪ್ರಾಚಾರ್ಯರಾದ ಮಲ್ಲಿಕಾರ್ಜುನ ಬಿ. ಆರ್. ನುಡಿದರು.
ಬೀದರ ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ಗುಣಾತ್ಮಕ ಶಿಕ್ಷಣ ಹಾಗೂ ಸಂಪನ್ಮೂಲಕ್ಕೆ ಕೊರತೆ ಇಲ್ಲ. ನಮ್ಮ ಇಲಾಖೆಯ ಮೇಲಾಧಿಕಾರಿಗಳ ಹಾಗೂ ಶಿವಶಂಕರ ಟೊಕರೆ ಅವರ ಮಾರ್ಗದರ್ಶನದಿಂದ ಇನ್ನು ಮುಂದೆ ನಿರಂತರ ಕ್ಯಾಂಪಸ್ ಆಯೋಜಿಸಿ ಯುವಕರಿಗೆ ಉದ್ಯೊಗ ಕೊಡಿಸುವ ದಿಶೆಯಲ್ಲಿ ಕಾರ್ಯೊನ್ಮುಖರಾಗುತ್ತೇವೆಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಶ್ರೀ ಶಿವಶಂಕರ್ ಟೋಕರೆಯವರು ಇಂದು ನಮ್ಮಲ್ಲಿ ಕೈಗಾರಿಕೆಗಳಿರದ ಕಾರಣ ಯುವಕರಲ್ಲಿ ಕೌಶಲ್ಯ ವಿದ್ದರು ನೌಕರಿ ಸಿಗುತ್ತಿಲ್ಲ, ಅದರ ಹಿನ್ನೆಲೆಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಲಾಗಿದೆ ಎಂದು ನುಡಿದರು. ಪ್ರಥಮವಾಗಿ ಒಂದು ವರ್ಷದ ತರಬೇತಿ ನೀಡುತ್ತಿದ್ದು ತದನಂತರ ತಮ್ಮ ನಡಾವಳಿಕೆ ಕೆಲಸದ ಬದ್ಧತೆ ಗಮನಿಸಿ ಖಾಯಂ ನೀಡಲಾಗುವುದು. ತಾವು ಮನಸ್ಸಿಟ್ಟು ಕೆಲಸಮಾಡಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ಟೊಯೋಟಾ ಕಾರ್ಖಾನೆಯ ಅಧಿಕಾರಿ ಬ್ರಿಗೇಸ್ ಎಸ್ ಕಾಂಬಳೆ ಮಾತನಾಡಿ, ನಮ್ಮಲ್ಲಿ ಕೆಲಸ ಬಹಳಷ್ಟು ಇದೆ ಆದರೆ ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ ತಾವು ಪ್ರಾರಂಭ ಹಂತದಲ್ಲಿ ಹಣಕ್ಕೆ ಗಮನ ಹರಿಸದೆ ಶ್ರಮ ಸಂಸ್ಕøತಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಆಯ್ಕೆಯಾದವರಿಗೆ ಡಿಪ್ಲೊಮಾ ಅರ್ಹತೆ ಉಳ್ಳವರಿಗೆ ರೂ. 22,000/- ಹಾಗೂ ಐಟಿಐ ಮಾಡಿದವರಿಗೆ ರೂ. 15,000/- ವೇತನ ನೀಡಲಾಗುವದೆಂದು ತಿಳಿಸಿದರು.
ಫ್ಲ್ಯಾಶ್ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿಯಾದ ವರುಣ್ ಸಿಂಗ್ ಮಾತನಾಡಿ, ನಮ್ಮಲ್ಲಿ ಪ್ರಾಯೋಗಿಕ ಕ್ಷಮತೆ ಹೇಳಿಕೊಡಲಾಗುತ್ತಿದೆ ತಾವು ಕಲಿತು ಕೆಲಸ ಮಾಡಬೇಕು ಎಂದು ನುಡಿದರು. ನಮ್ಮಲ್ಲಿಯೂ ಸಹ ಕುಶಲಕರ್ಮಿಗಳ ಯೋಗ್ಯತೆ ಪ್ರಾಯೋಗಿಕ ಕ್ಷಮತೆ ಅನುಗುಣವಾಗಿ ಖಾಯಂ ಮಾಡಲಾಗುವುದು. ನಮ್ಮಲ್ಲಿಯೂ ಟೊಯೊಟಾ ನವರು ಹೇಳಿದಂತೆ ವೇತನ ಕೊಡಲಾಗುವದು ಎಂದರು.
ದಿನಾಂಕ 14/06/2023 ರಂದು ಮುಂಜಾನೆಯಿಂದ ಸಾಯಂಕಾಲದವರೆಗೆ ನಿರಂತರವಾಗಿ ಡಿಪೆÇ್ಲೀಮಾ ಹಾಗೂ ಐಟಿಐ ಮಕ್ಕಳಿಗೆ ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ, ವೈಯಕ್ತಿಕ ಪರೀಕ್ಷೆ ಆದಮೇಲೆ ಕೊನೆಯದಾಗಿ ಡಿಪೆÇ್ಲೀಮಾ ಮೆಕ್ಯಾನಿಕಲ್, ಆಟೋಮೊಬೈಲ್, ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್, ವಿಭಾಗದಿಂದ ಒಟ್ಟು 95 ವಿದ್ಯಾರ್ಥಿಗಳು ಹಾಗೂ ಐಟಿಐ 15 ವಿದ್ಯಾರ್ಥಿಗಳಿಗೆ ಉದ್ಯೋಗ ದೃಢೀಕರಣ ಪತ್ರ ನೀಡಲಾಯಿತು. ಇದು ಎರಡನೇ ಕ್ಯಾಂಪಸ್ ಸಂದರ್ಶನವಾಗಿದೆ.
ಮೊದಲಿಗೆ ವಕೀಲ ಪಟೇಲ್ ಪ್ರಾರ್ಥನೆ ನಡೆಸಿದರೆ ಅರುಣ್ ಮುಕಾಸಿ ನಿರೂಪಿಸಿದರೆ ಪ್ಲೇಸ್ಮೆಂಟ್ ಅಧಿಕಾರಿ ಮಹೇಶ್ ಶೆಗೆದಾರ್ ಸ್ವಾಗತಿಸಿದರು, ನಾಗರಾಜ್ ವಂದಿಸಿದರು ಹಾಗೂ ಮಾನ್ಯ ರಿಜಿಸ್ಟ್ರಾರ್ ಶಿರಾಜುದ್ದೀನ್ ಸಂಸ್ಥೆಯ ವಿಭಾಗಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಪಾಲ್ಗೊಂಡು ಕ್ಯಾಂಪಸ್ ಸಂದರ್ಶನ ಯಶಸ್ವಿಗೊಳಿಸಿದ್ದಾರೆ.