ಸರಕಾರಿ ಪದವಿ ಕಾಲೇಜಿನ ಅಕ್ರಮಗಳ ತನಿಖೆಗೆ ಆಗ್ರಹ

ಕಲಬುರಗಿ,ಮಾ 24: ನಗರದ ಸರಕಾರಿ ಪದವಿ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳ ಕುರಿತು ಕೂಡಲೇ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ಆಗ್ರಹಿಸಿದರು. ನಗರದ ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಾವಿದ್ಯಾಲಯದಲ್ಲಿ ನಡೆದಿರುವ ಆರ್ಥಿಕಅವ್ಯವಹಾರಗಳ ಕುರಿತಾದ ಸ್ಪಷ್ಟತೆಗಾಗಿ ವಿಶೇಷ ಲೆಕ್ಕ ಪರಿಶೋಧನೆ ಕೈಗೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಬೇಕು. ಮುಂದಿನ ಒಂದು ವಾರದೊಳಗೆ ಈ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿಎದುರು ಧರಣಿ ಕೈಗೊಳ್ಳಲಾಗುವುದು ಎಂದರು.
1934ರಲ್ಲಿ ಆರಂಭಗೊಂಡ ಕಲಬುರಗಿ ನಗರದ ರಾಜಾಪುರ ಸಮೀಪದ ಸರಕಾರಿ ಪದವಿ (ಸ್ವಾಯತ್ತ)ಮಹಾವಿದ್ಯಾಲಯದಲ್ಲಿ ಸುಮಾರು 4500ಕ್ಕೂ ಅಧಿಕ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಇಂತಹಹೆಸರಾಂತ ಕಾಲೇಜಿನಲ್ಲಿ ಇತ್ತೀಚೆಗೆ ಅಕ್ರಮಗಳು ಹೆಚ್ಚಾಗಿರುವ ಕಾರಣಕ್ಕಾಗಿವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸರಕಾರವು ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ
ಅಡಿ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್‍ಗಳನ್ನು ಆರಂಭಿಸಲು 2021-22ನೇ
ಶೈಕ್ಷಣಿಕ ಸಾಲಿನಲ್ಲಿ ಒದಗಿಸಿದ್ದ 27 ಬ್ಯಾಟರಿ, ಸೌಂಡ್ ಬಾಕ್ಸ್ ಹಾಗೂ ಪೀಠೋಪಕರಣಗಳು ಕಳುವಾಗಿ ಸುಮಾರು ಆರು ತಿಂಗಳು ಕಳೆದಿವೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಕಳೆದ ಆರುತಿಂಗಳಿಂದ ಸ್ಮಾರ್ಟ್ ಕ್ಲಾಸ್ ಪಾಠಗಳು ನಡೆಯದಂತಾಗಿದೆ.ಕಾಲೇಜಿನ ಹಳೆಯ ಪೀಠೋಪಕರಣಗಳು, ಹಳೆಯ ಎಲೆಕ್ಟ್ರಿಕಲ್‍ಸಾಮಗ್ರಿಗಳನ್ನು ಸರಕಾರದ ಗಮನಕ್ಕೆ ತಂದ ಬಳಿಕವೇ ಮಾರಾಟಮಾಡಿ, ಅದರಿಂದ ಬಂದ ಹಣವನ್ನು ಕಾಲೇಜಿನ ಅಭಿವೃದ್ಧಿ ಸಮಿತಿಯ ಖಾತೆಗೆ ಹಣ ಜಮಾ ಮಾಡಬೇಕೆಂಬ ನಿಯಮವಿದೆ. ದುರಂತವೆಂದರೆ,ಕಳೆದ ಎರಡು ವರ್ಷಗಳಲ್ಲಿ ಕಾಲೇಜಿನ ಎಲ್ಲ ಹಳೆಯ
ಪೀಠೋಪಕರಣಗಳು ನಾಪತ್ತೆಯಾಗಿದ್ದರೂ, ಈ ಕುರಿತುಪ್ರಾಂಶುಪಾಲರು ಸೂಕ್ತ ಕ್ರಮಕ್ಕೆ ಮುಂದಾಗದೆ ಇರುವುದುಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ಹೆಚ್ಚಾಗಲುಕುಮ್ಮಕ್ಕು ನೀಡಿದಂತಾಗಿದೆ ಎಂದು ಆರೋಪಿಸಿದರು. ಕಾಲೇಜಿನ ಐ.ಡಿ.ಪಿ ಅಡಿಯಲ್ಲಿ ಸುಮಾರು ರೂ.40ಲಕ್ಷದಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಸಂಶಯಗಳಿದ್ದು, ಈಕುರಿತು ವಿಶೇಷ ಲೆಕ್ಕ ಪರಿಶೋಧನೆಕೈಗೊಂಡರೆ ಅಸಲಿಸತ್ಯಾಂಶ ಹೊರಬೀಳಲಿದೆ ಎಂದರು.ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರವೇಶಾತಿ ಸಂದರ್ಭದಲ್ಲಿ ರೋಸ್ಟರ್ ಪದ್ಧತಿಯನ್ನು ಬಹಿರಂಗವಾಗಿ ಉಲ್ಲಂಘಿಸಿದ್ದು, ಜಾತಿ
ಮತ್ತು ಪ್ರವರ್ಗವಾರು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸದೆವಿದ್ಯಾರ್ಥಿಗಳ ಶಿಕ್ಷಣದ ಹಕ್ಕು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.