ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಬಾದಾಮಿ,ಜು.19: ಇಂದಿನ ಪ್ರತಿಭಾವಂತ ಮಕ್ಕಳು ಮುಂದಿನ ಪ್ರಜ್ಞಾವಂತ ನಾಗರಿಕರಾಗಿ ದೇಶವನ್ನು ಇನ್ನೂ ಉತ್ತಮ ಮಟ್ಟದಲ್ಲಿ ಮುನ್ನೆಡೆಸುವ ಜವಾಬ್ದಾರಿ ವಹಿಸಬೇಕು ಎಂದು ರಾಜ್ಯ ನೌಕರರ ಸಂಘದ ಕಾರ್ಯಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಅವರು ಪಟ್ಟಣದ ಶ್ರೀ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಮಂಟಪದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕ ಘಟಕದ 2020-21, 2021-22 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ ನೌಕರರ ಮಕ್ಕಳು ಪ್ರತಿಭಾವಂತರಾಗಿದ್ದು, ಮುಂದಿನ ದಿನಗಳಲ್ಲಿ ಅವರೂ ಕೂಡ ತಮ್ಮ ಪ್ರತಿಭೆ ಮೂಲಕ ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವಂತೆ ನಾವುಗಳು ಪುರಸ್ಕಾರ ಮೂಲಕ ಪ್ರೋತ್ಸಾಹಿಸುತ್ತೇವೆ.
ವಿವಿಧ ಇಲಾಖೆಗಳ ಸರಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಕೊಡಮಾಡಲಾಗುತ್ತಿದ್ದು, ನೌಕರರು ಉತ್ತಮ ಕೆಲಸ ನಿರ್ವಹಿಸಿದ ಆನ್‍ಲೈನ್ ಮೂಲಕ ಜನೆವರಿ ತಿಂಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂದ ಅವರು ಶತಮಾನ ಕಂಡ ರಾಜ್ಯ ನೌಕರರ ಸಂಘವು ರಾಜ್ಯಾಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ ನೌಕರರ ಹಲವಾರು ಬೇಡಿಕೆಗಳು ಈಡೇರಿವೆ. ನೌಕರರ ದಿನ ಆಚರಣೆಯನ್ನು ಕಳೆದ ವರ್ಷ ಏಪ್ರಿಲ್ 21 ರಂದು ಮಾಡಲಾಗಿದೆ ಎಂದರು.
ತಹಸೀಲ್ದಾರ್ ಜೆ.ಬಿ.ಮಜ್ಜಗಿ, ಬಿಇಒ ಆರೀಫ್ ಬಿರಾದಾರ, ರಾಜ್ಯ ಸಮಿತಿ ಸದಸ್ಯ ಆರ್.ಟಿ.ಪಟ್ಟಣಶೆಟ್ಟಿ, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ ಉಪಸ್ಥಿತರಿದ್ದರು. ಸಂಘದ ಖಜಾಂಚಿ ಆರ್.ಬಿ.ಹೊತಗಿಗೌಡ್ರ ಸಂಘದ ವಾರ್ಷಿಕ ಅಡಾವೆ ಪತ್ರಿಕೆಯನ್ನು ಓದಿ ಸದಸ್ಯರ ಒಮ್ಮತ ಪಡೆದರು. ಸಂಘದ ಅಧ್ಯಕ್ಷ ರಮೇಶ ಅಥಣಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2020-21, 2021-22 ಸಾಲಿನ ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳನ್ನು, ಸಾಧಕರಿಗೆ ಸಂಘದವತಿಯಿಂದ ಸನ್ಮಾನಿಸಲಾಯಿತು. ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನವರ, ಸಂಜೀವ ಸತ್ಯರಡ್ಡಿ, ಎಸ್.ಕೆ.ಹಿರೇಮಠ, ವಿಠ್ಠಲ ವಾಲಿಕಾರ, ಸುರೇಶ ಇಂಜಗನೇರಿ, ಸಿಡಿಪಿಒ ಅಣ್ಣಪೂರ್ಣಾ ಕುಬಕಡ್ಡಿ, ಬಸಮ್ಮ ನರಸಾಪೂರ, ಸಿದ್ದನ್ನ ಹಂಚಿನಾಳ, ಸುಭಾಸ ಅವರಾದಿ, ಡಿ.ಕೆ.ಚಿಮ್ಮಲ, ಸಂತೋಷ ಪಟ್ಟಣಶೆಟ್ಟಿ, ಕೃಷಿ ಅಧಿಕಾರಿ ಅಶೋಕ ತಿರಕನ್ನವರ, ಬಿ.ಎಸ್.ಅಬ್ಬಿಗೇರಿ, ಡಿ.ವೈ.ಹೊಸಮನಿ, ಸುಜಾತಾ ಪÀಡತಾರೆ ಸೇರಿದಂತೆ ನೌಕರರು ಪಾಲ್ಗೊಂಡಿದ್ದರು. ಸದಾಶಿವ ಮರಡಿ, ವಿ.ಎಸ್.ಸರಗಣಾಚಾರಿ ನಿರೂಪಿಸಿದರು. ಕಮಲಾಕ್ಷಿ ಗಾಣಿಗೇರ ವಂದಿಸಿದರು.