ಸರಕಾರಿ ನೌಕರರು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಬೇಕು- ಮಲ್ಲಿಕಾರ್ಜುನ ಶ್ರೀ


ಧಾರವಾಡ ಮಾ.23-: ಸರಕಾರಿ ನೌಕರರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸಾರ್ವಜನಿಕರು ಮೆಚ್ಚುವಂತಹ ಕಾರ್ಯ ಮಾಡಿದಾಗ ಜನರ ಪ್ರೀತಿ, ಗೌರವಗಳಿಗೆ ಪಾತ್ರರಾಗುತ್ತಾರೆ, ಆ ದಿಸೆಯಲ್ಲಿ ನಿವೃತ್ತ ಇಂಜನಿಯರ ಎಸ್. ಬಿ. ಗುತ್ತಲ ಅವರು ಸಾರ್ವಜನಿಕರು ಮೆಚ್ಚುವಂತಹ ಕಾರ್ಯ ಮಾಡಿ ಜನಮಾನಸದಲ್ಲಿ ಉಳಿದು ಇಂದು ಸನ್ಮಾನ ಹಾಗೂ ಅಭಿನಂದನೆಗೆ ಭಾಜನರಾಗಿದ್ದಾರೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಎಸ್. ಬಿ. ಗುತ್ತಲ-80 ಅಭಿನಂದನಾ ಸಮಿತಿ, ಏರ್ಪಡಿಸಿದ್ದ ಸಾರ್ವಜನಿಕ ಅಭಿನಂದನಾ ಸಮಾರಂಭ ಮತ್ತು ಶೇಷ ಸಿಂಚನ' ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಗುತ್ತಲರನ್ನು ಸನ್ಮಾನಿಸಿ ಮಾತನಾಡಿದ ಅವರು ಮಾತನಾಡಿದ ಶ್ರೀಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇಂಜನೀಯರರಾಗಿ ಎಸ್. ಬಿ. ಗುತ್ತಲ ಅವರು ಅವಳಿನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯಿದ್ದ ಸಂದರ್ಭದಲ್ಲಿ ಅವಳಿನಗರದ ನಾಗರಿಕರಿಗೆ ಸರಿಯಾಗಿ ಕುಡಿಯುವ ನೀರು ಒದಗಿಸುವಲ್ಲಿ ಇವರು ಪಟ್ಟ ಪರಿಶ್ರಮ, ಸೇವೆ ಶ್ಲಾಘನೀಯ ಎಂದರು. ವಿಶ್ವಭಾರತಿ ವೇದ ಪೀಠ, ಹುಬ್ಬಳ್ಳಿ ಅಧ್ಯಕ್ಷರಾದ ಡಾ. ಸಮೀರಾಚಾರ್ಯ ಕಂಠಪಲ್ಲಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್. ಡಿ. ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯಕಶೇಷ ಸಿಂಚನ’ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಮಹಾಪೌರರಾದ ಹನುಮಂತರಾವ ವ್ಹಿ. ಡಂಬಳ, ಪೂರ್ಣಾ ಪಾಟೀಲ, ನಿವೃತ್ತ ಮುಖ್ಯ ಅಭಿಯಂತರ ಎಂ. ಬಿ. ಪರಪ್ಪಗೌಡರ, ಸಂಪಾದಕ ಮಂಡಳಿಯ ಪ್ರದಾನ ಸಂಪಾದಕರಾದ ಪ್ರೊ. ಬಿ. ಎಸ್. ಶಿರೋಳ ಹಾಗೂ ನಿವೃತ್ತ ಬ್ಯಾಂಕ್ ಪ್ರಬಂಧಕ ಶ್ರೀನಿವಾಸ ಕುಲಕರ್ಣಿ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಜಿ. ಎಂ. ಹೆಗಡೆ ಶುಭಾಶಂಸನೆ ನುಡಿಗಳನ್ನಾಡಿದರು.
ಸನ್ಮಾನ ಸ್ವೀಕರಿಸಿದ ಎಸ್. ಬಿ. ಗುತ್ತಲರು ಪ್ರತಿಕ್ರಿಯಿಸಿ, ತಮ್ಮ ಸೇವಾ ಅವದಿಯಲ್ಲಿ ಸಹ ಸಿಬ್ಬಂದಿಗಳ ಹಾಗೂ ಪಾಲಿಕೆ ಸದಸ್ಯರ, ಜನಪ್ರತಿನಿಧಿಗಳ, ಸಾರ್ವಜನಿಕರಿಂದ ದೊರೆತ ಸಹಕಾರವನ್ನು ಸ್ಮರಿಸಿ, ಅಭಿನಂದನಾ ಸಮಿತಿಯ ಪ್ರೀತಿ, ವಿಶ್ವಾಸ, ಗೌರವಗಳಿಗೆ ಹೃದಯ ತುಂಬಿ ತಮ್ಮ ಕೃತಜ್ಞತೆ ಸಲ್ಲಿಸಿದರು.
ಅಭಿನಂದನಾ ಸಮಿತಿ ಅಧ್ಯಕ್ಷರು ಹಾಗೂ ಖ್ಯಾತ ಮನೋರೋಗ ತಜ್ಞರಾದ ಡಾ. ಆನಂದ ಪಾಂಡುರಂಗಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು, ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷ್ಯರಾಗಿ ಇರಲು ಸಾಧ್ಯವೆಂದು ಹೇಳಿ ಎಸ್. ಬಿ. ಗುತ್ತಲರು ಸಾಮಾಜಿಕ ಕಳಕಳಿ, ಸೇವೆಗೆ ಧ್ಯೋತಕವಾದಿ ಇಂದು ಸಾರ್ವಜನಿಕ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದರು.
ವೇದಿಕೆಯಲ್ಲಿ ಖ್ಯಾತ ಆಧ್ಯಾತ್ಮಿಕ ಚಿಂತಕರು ಹಾಗೂ ಉಪನ್ಯಾಸಕರೂ ಆದ ಡಾ. ಪಂಡಿತ ವೆಂಕಟನರಸಿಂಹಾಚಾರ್ಯ ಜೋಶಿ, ಸಾಹಿತಿ ಶ್ರೀನಿವಾಸ ವಾಡಪ್ಪಿ, ಅ.ಭಾ.ಬ್ರಾ. ಮಹಾಸಭಾದ ಉಪಾಧ್ಯಕ್ಷ ಎನ್. ಆರ್. ಕುಲಕರ್ಣಿ, ನಿವೃತ್ತ ಅಧೀಕ್ಷಕ ಅಭಿಯಂತರರಾದ ಜಿ. ವ್ಹಿ. ನವಲಗುಂದ, ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಓಂಕಾರ ಭಜನಾ ಮಂಡಳಿ ಸೇರಿದಂತೆ ಹಲವು ಭಜನಾ ಮಂಡಳಗಳಿಂದ ಸಂಭ್ರದಿಂದ ಭಕ್ತಿ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು. ಡಾ. ಕೃತಿಕಾ ಗುತ್ತಲ ಅವರು ಭಾಗವಹಿಸಿದ ಭಜನಾ ಮಂಡಳಿಗಳಿಗೆ ನೆನಪಿನ ಕಾಣಿಕೆ ಹಾಗೂ ಅಭಿನಂದನಾ ಸಮಾರಂಭದ ಅತಿಥಿಗಳಿಗೆ ಗೌರವ ಸಲ್ಲಿಸಿದರು.
ಕು. ರಿಷಭ ಗುತ್ತಲ ಅಮೇರಿಕಾದಿಂದ ತನ್ನ ಅಜ್ಜನ ಅಭಿನಂದನಾ ಕಾರ್ಯಕ್ರಮಕ್ಕೆ ಆನ್‍ಲೈನ್ ಮೂಲಕ ಪ್ರಾರ್ಥನೆ ನಡೆಸಿಕೊಟ್ಟನು. ಅಭಿನಂದನಾ ಸಮಿತಿ ಉಪಾಧ್ಯಕ್ಷ ಪ್ರಕಾಶ ಎಸ್. ಉಡಿಕೇರಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ಸರೋಜಾ ರಾವ್, ಸಂಯೋಜಕ ಸತೀಶ ತುರಮರಿ, ನ್ಯಾಯವಾದಿ ಶಿವಾನಂದ ಭಾವಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅಭಿನಂದನಾ ಸಮಿತಿ ಕೋಶಾಧ್ಯಕ್ಷ ಎಸ್. ಎಂ. ರಾಚಯ್ಯನವರ ಅಭಾರ ಮನ್ನಿಸಿದರು.
ನಿವೃತ್ತ ಜೆ.ಎಸ್. ಎಸ್. ಪ್ರಾಧ್ಯಾಪಕ ಪ್ರೊ. ಮಧು ಹೊಸಕೇರಿಯವರು ಎಸ್. ಬಿ. ಗುತ್ತಲರನ್ನುದ್ದೇಶಿಸಿ ಗೀತೆ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಎಸ್. ಬಿ. ಗುತ್ತಲ ಅವರನ್ನು ಕರ್ನಾಟಕ ವಿದ್ಯಾವರ್ಧಕ ಸಂಘ, ಹು-ಧಾ ಮಹಾನಗರ ಪಾಲಿಕೆ ನೌಕರರ ಸಂಘ ಸೇರಿದಂತೆ ಹಲವಾರು ಸಂಘ,ಸಂಸ್ಥೆಗಳು, ಸಾರ್ವಜನಿಕರು ಸನ್ಮಾನಿಸಿ, ಗೌರವಿಸಿದರು.
ಕಾರ್ಯಕ್ರಮದಲ್ಲಿ ನಿಂಗಣ್ಣ ಕುಂಟಿ (ಇಟಗಿ), ಸದಾನಂದ ಶಿವಳ್ಳಿ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ, ಮನೋಜ ಪಾಟೀಲ, ಬಿ. ಎಲ್. ಪಾಟೀಲ, ಎಂ. ಬಿ. ಕಟ್ಟಿ, ಡಾ. ಪ್ರಭಾ ನೀರಲಗಿ, ಜಯಶೀಲಾ ಬೆಳಲದವರ, ವಿಜಯಾ ಲಿಂಬಣ್ಣದೇವರಮಠ, ಲಕ್ಷ್ಮಿಕಾಂತ ಇಟ್ನಾಳ, ರಮೇಶ ಜಮಾದಾರ, ರಾಘವೇಂದ್ರ ಗುತ್ತಲ, ಪ್ರತಾಪ ಚವ್ಹಾಣ, ಕಟ್ಟಿ, ಜಿ.ಎಸ್. ತೊರಗಲ್ಲಮಠ, ಬಿ.ಸಿ. ಬಾರಿಮರದ, ಬಿ. ಎಲ್. ಪಾಟೀಲ, ಡಿ. ಎಂ. ಸಿಂದಗಿ, ಚನ್ನಯ್ಯ ಹಿರೇಮಠ, ಹಫೀಜ್, ಆರ್. ಎಂ. ಪಾಟೀಲ, ವಾದಿರಾಜ ಗುತ್ತಲ, ನಿಂ. ಶಿ. ಕಾಶಪ್ಪನವರ ಹಾಗೂ ಎಸ್. ಬಿ. ಗುತ್ತಲರ ಅಭಿಮಾನಿಗಳು, ಪರಿವಾರದವರು, ಅಭಿನಂದನಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.