ಸರಕಾರಿ ಗೌರವದೊಂದಿಗೆ ಯೋಧ ಶಿಂಧೆ ಪಾರ್ಥಿವ ಶರೀರದ ಮೆರವಣಿಗೆ


ನವಲಗುಂದ,ನ.17: ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೃದಯಘಾತದಿಂದ ನಿಧನ ಹೊಂದಿದ ವೀರಯೋಧ ಶಟವಾಜಿರಾವ್ ಶಿಂಧೆ ಅವರ ಪಾರ್ಥಿವ ಶರೀರ ತಾಲ್ಲೂಕಾ ಆಡಳಿತದ ಸಕಲ ಸರಕಾರಿ ಗೌರವದೊಂದಿಗೆ ನವಲಗುಂದ ಪಟ್ಟಣದ ಪ್ರಮುಖ ರಸ್ತೆ ಮೂಲಕ ಅಮರಗೋಳ ತಲುಪಿದಾಗ ಗ್ರಾಮದಲ್ಲಿಯೂ ಮೆರವಣಿಗೆ ಮಾಡಲಾಯಿತು. ರಸ್ತೆಯುದ್ದಕ್ಕೂ ಜೈ ಜವಾನ್ ಜೈ ಕಿಸಾನ್ ಘೋಷಣೆಗಳೊಂದಿಗೆ ಯುವಕರು ಬೈಕ್ ರ್ಯಾಲಿ ನಡೆಸಿದರು.
ಶಾಸಕ ಎನ್ ಎಚ್ ಕೋನರಡ್ಡಿ, ತಹಶೀಲ್ದಾರ್ ಸುಧೀರ್ ಸಾಹುಕಾರ್ ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಮರಾಠಾ ಸಮಾಜದ ಅಧ್ಯಕ್ಷ ಜೀವನ ಪವಾರ, ನೇತಾಜಿ ಕಲಾಲ್, ನಿಂಗಪ್ಪ ಬಾರಕೇರ, ಮಂಜುನಾಥ್ ಜಾಧವ, ಮಹಾಮಂಡಳ ರಾಜ್ಯಾಧ್ಯಕ್ಷ ಅಬ್ದುಲರಝಾಕ ನದಾಫ್, ಶಿವಾನಂದ ಜಾಕೋಜಿ, ಮಾರುತಿ ಕರಂಡಿ, ತುಕಾರಾಂ ಜಾಧವ, ಶಿವಾಜಿ ಸುರವಂಶಿ, ಪ್ರೇಮಾ, ಹತ್ತಿಕಟಗಿ, ಶಾಂತವ್ವ ಸಾಳೊಂಕಿ, ಕುಮ್ಮವ್ವ ಸುರಕೋಡದ ಪ್ರೇಮಾ ಶಿಂದೆ, ರತ್ನವ್ವ ಪವಾರ, ಸಿಪಿಐ ರವಿಕುಮಾರ್ ಕಪ್ಪತ್ತಣ್ಣವರ ಪಿಎಸ್‍ಐ ಜನಾರ್ಧನ್ ಭಟ್ರಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ತಾಲ್ಲೂಕಾ ಮಾಧ್ಯಮ ಬಂದುಗಳು, ಮಾಜಿ ಯೋಧರು, ಎನ್ ಸಿ. ಸಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೆÇಲೀಸ್ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.