ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ:ಶಿಕ್ಷಕ ಪರ್ವ ಸಮಾರಂಭ

ರಾಯಚೂರು, ಸೆ.೨೨- ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ಪರ್ವ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ರಾಯಚೂರು ನಗರಾಭಿವೃದ್ಧಿ ಅದ್ಯಕ್ಷ ತಿಮಪ್ಪ ನಾಡಗೌಡರು ಮಾತನಾಡಿ,ನಾನು ಈ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದೂ,ಆ ದಿನಗಳಿಂದ ಈ ಸಂಸ್ಥೆಯ ಬಹಳಷ್ಟು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ.ಇಲ್ಲಿ ಐಟಿಐ ಮುಗಿಸಿದ ಅನೇಕ ವಿದಾರ್ಥಿಗಳು ಬೇರೆ ಬೇರೆ ಊರಿನಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಾವು ಕೂಡ ಇದರ ಸದುಪಯೋಗ ಪಡಿಸಿಕೊಂಡು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮುಖ್ಯಅತಿಥಿಗಳಾಗಿ ಭಾಗವಹಿಸಿದ ನಿವೃತ್ತಿ ಶಿಕ್ಷಕ ಹಾಗೂ ಸಾಹಿತಿ ಡಾ.ಬಿ.ಜಿ. ಹುಲಿ ಮಾತನಾಡಿ,ಮಾನವರಾಗಿ ಹೋಗುವ ದಾರಿಯೇ ಶಿಕ್ಷಣ , ಶಿಕ್ಷಕ ಬದುಕಿಗೆ ದಾರಿಯನ್ನು ತೋರಿಸುವವನು ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಟವಾದದ್ದು ಮತ್ತು ಯಾವುದೇ ವೃತ್ತಿ ಹೀನವಾದದ್ದಲ್ಲ.ತಾವು ಐ. ಟ .ಐ ಆರಿಸಿಕೊಂಡಿದ್ದಿರಿ ಇದರಲ್ಲಿಯೇ ಚೆನ್ನಾಗಿ ಓದಿ ,ನಿಮಗೆ ಫಲವಿದೆ. ಐ.ಟಿ.ಐ ಓದಿ ಕಲಿಯುವ ಶಿಕ್ಷಣವಲ್ಲ,ನೋಡಿ,ಮಾಡಿ ಕಲಿಯುವ ಶಿಕ್ಷಣ ಇದರಲ್ಲಿಯೇ ಕೌಶಲ್ಯ ಬೆಳೆಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು. ಸರಕಾರಿ ಪ್ರೌಢಶಾಲೆ ಡೊಂಗರಾಂಪೂರ
ಮುಖ್ಯ ಶಿಕ್ಷಕ ಶರಣಬಸಪ್ಪ ಮಾತನಾಡಿ, ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ನೀವು ಮುನ್ನುಗ್ಗಿದರೆ ಛಲವನ್ನು ಸಾಧಿಸಿರುತ್ತೀರೆಂದು ತಿಳಿಸಿದರು.ಹಾಗೂ ಸಂಸ್ಥೆಯ ವಹಿಸಿಕೊಂಡಿದ್ದರು. ಪ್ರಾಚಾರ್ಯ ಡಾ. ಶರಣಬಸಪ್ಪ ಸಡ್ಡು, ಅದ್ಯಕ್ಷತೆಯನ್ನು ಸದಾಶಿವಪ್ಪ ವಹಿಸಿದ್ದರು.