ಸರಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳುವಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು:ಎಸ್.ನಾಗಶ್ರೀ

ಕಲಬುರಗಿ:ನ.03:ಸರಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ನಾಗಶ್ರೀ ಹೇಳಿದರು.
ಶುಕ್ರುವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೊಲೀಸ್ ಇಲಾಖೆ ಕರ್ನಾಟಕ ಲೋಕಾಯುಕ್ತ, ಕಲಬುರಗಿ ಇವರ ಸಹಯೋಗದೊಂದಿಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ರಾಹ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.
ಸರಕಾರಿ ಕಚೇರಿಗೆ ಬಂದ ಜನ ಸಮಾನ್ಯರ ಕೆಲಸ ಕಾರ್ಯಗಳಲ್ಲಿ ವಿಳಂಬ ನೀತಿ ಅನುಸರಿಸದೇ ಯಾವುದೇ ಆಮಿಷಕ್ಕೊಳಗಾಗದೇ ನಿರ್ವಹಿಸಬೇಕು. ನ್ಯಾಯಯುತ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಲಂಚಗೋಸ್ಕರ ನೈತಿಕ ಮೌಲ್ಯ ಕಳೆದುಕೊಳ್ಳಬಾರದು ನಮ್ಮ ಸ್ಥಾನ ಮತ್ತು ಅಧಿಕಾರ ಸದುಪಯೋಗ ಪಡೆಯಬೇಕು ಯಾವುದೇ ಆಮಿಷಕ್ಕೊಳಗಾಗದೆ ಕೆಲಸ ಮಾಡಬೇಕು ಎಂದರು.
ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಡೆಯಲು ಎಲ್ಲಾ ಅಧಿಕಾರಿ ದೃಢ ಸಂಕಲ್ಪ ಮಾಡಬೇಕು. ಭ್ರಷ್ಟಾಚಾರದ ವಿಚಾರಗಳು ನಮ್ಮ ಮನಸಿನಲ್ಲಿದ್ದರೆ ಕಿತ್ತೋಗೆಯಬೇಕು ಎಂದು ಎಂದು ಕಿವಿಮಾತು ಹೇಳಿದರು.
ನಗರ ಪೊಲೀಸ್ ಆಯುಕ್ತರಾದ ಆರ್.ಚೇತನ್ ಅವರು ಮಾತನಾಡಿ, ಸರಕಾರದ ಸೇವೆಗಳು ಮುಕ್ತವಾಗಿ ಕರ್ತವ್ಯದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪೊಲೀಸ್ ಕಚೇರಿ ಫೈಲ್‍ಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಾರ್ವಜನಿಕ ಮುಕ್ತವಾಗಿ ಕರ್ತವ್ಯ ನಿರ್ವಹಸಬೇಕು. ಈ ಕುರಿತು ಜಿಲ್ಲಾಮಟ್ಟದ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಹೆಚ್ಚಿನ ಅರಿವು ಮೂಡಿಸುವಂತಹ ಕೆಲಸಗಳಾಗಬೇಕು ಎಂದರು.
ಕರ್ನಾಟಕ ಪೊಲೀಸ್ ಲೋಕ ಸೇವಾ ಅಧೀಕ್ಷಕ ಎ.ಆರ್. ಕರ್ನೂಲ್ ಅವರು ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲಾ ಅಧಿಕಾರಿಗಳ ವರ್ಗದ ಸಹಕಾರ ಅಗತ್ಯವಿದೆ. ಪೊಲೀಸ್ ಮತ್ತು ನ್ಯಾಯಾಧೀಶರು ಒಂದೇ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಂಡರೆ ಶಿಕ್ಷೆ ನೀಡಲಾಗುತ್ತಿದೆ. ಆಮೀಷಕ್ಕೆ ಒಳಗಾಗದೇ ಕೆಲಸ ಮಾಡಿದ್ದಾರೆ ಯಾವುದೇ ಭಯ ಇರುವುದಿಲ್ಲ ಎಂದರು.
ಲೋಕಾಯುಕ್ತ ಕಚೇರಿ ಒಳ್ಳೆಯ ಕೆಲಸ ಮಾಡುತ್ತಿದೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಕೆಲವೊಂದು ಸಿಬ್ಬಂದಿಗಳು ಅಧಿಕಾರಿಗಳು ಎಲ್ಲಿಗೆ ಹೋಗುತ್ತಾರೆ ಏನು ಕೆಲಸ ಮಾಡುತ್ತಾರೆ ವಿಚಾರದಲ್ಲಿರುತ್ತಾರೆ ಅದನ್ನು ಬಿಟ್ಟು ತಮಗೆ ನೀಡಿದ ಕೆಲಸವನ್ನು ಸರಿಯಾಗಿ ನಿರ್ವಹಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಬಿ ಫೌಜಿಯ್ ತರನ್ನುಮ್ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಹೊರಾಟ ಮಾಡಬೇಕು. ಕಾನೂನಿಗೆ ಬದ್ಧವಾಗಿ ಕೆಲಸ ಮಾಡಬೇಕು ಸಧೃಢವಾಗಿ ಹೋರಾಡುವುದು ಕಾರ್ಯಕ್ರಮಕ್ಕೆ ಸಿಮಿತವಾಗುವುದು ಬೇಡ ಪಾಲನೆ ಮಾಡೋಣ. ಸಾರ್ವಜನಿಕ ಸೇವೆ ಮುಕ್ತವಾಗಿ ಪ್ರಮಾಣಿಕವಾಗಿ ಯಾವುದೇ ರೀತಿ ಭ್ರಷ್ಟಾಚಾರಕ್ಕೆ ಒಳ್ಳಗಾಗದೆ ಕೆಲಸ ಮಾಡಬೇಕೆಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೇ ಪ್ರಾಸ್ತವಿಕವಾಗಿ ಮಾತನಾಡಿದರು.

ಲೋಕಾಯುಕ್ತ ಪೆÇಲೀಸ್ ಇಲಾಖೆ ಡಿ.ವೈ.ಎಸ್.ಪಿ. ಮಂಜುನಾಥ ಗಾಂಗಲ್, ಪ್ರತಿಜ್ಞೆ ವಿಧಿ ಬೋಧಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ, ಪೆÇಲೀಸ್ ಅಧೀಕ್ಷಕರು ಅಡ್ಡೂರು ಶ್ರೀನಿವಾಸಲು ಪ್ರೊಬೇಷನರಿ ಐ.ಪಿ.ಎಸ್. ಅಧಿಕಾರಿ ಗಜಾನಂದ ಬಾಳೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಲೋಕಾಯುಕ್ತ ಪೆÇಲೀಸ್ ಇಲಾಖೆ ಗೀತಾ ಬೆನಹಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.