ಸರಕಾರಿ ಉರ್ದು ಶಾಲೆಗೆ ಶಿಕ್ಷಣ ಸಂಯೋಜಕ ನವಾಜಖಾನ್ ಪಠಾಣ ದಿಡೀರ್ ಭೇಟಿ

ಆಲಮೇಲ:ಡಿ.9:ಪಟ್ಟಣದ ಸರಕಾರಿ ಉರ್ದು ಹೆಣ್ಣು ಹಾಗೂ ಗಂಡು ಮಕ್ಕಳ ಶಾಲೆಗೆ ಬುಧುವಾರ ಉರ್ದು ಶಿಕ್ಷಣ ಸಂಯೋಜಕ ನವಾಜಖಾನ್ ಪಠಾಣ ದಿಡೀರ್ ಭೇಟಿ ನಿಡಿ ಶಾಲಾ ದಾಖಲಾತಿ ಹಾಗೂ ಮಕ್ಕಳ ನಿತ್ಯದ ಹಾಜರಾತಿ ಪರಿಶೀಲಿಸಿ ನಂತರ ಆಯಾ ತರಗತಿಗಳಿಗೆ ಭೇಟಿ ನಿಡಿ ಮಕ್ಕಳ ಕಲಿಕೆಯ ಸ್ಥಿತಿಗತಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಕೆಲ ಸಮಯ ಮೇಷ್ಟ್ರಾಗಿ ಪಾಠ ಮಾಡುವ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಭ್ಯಾಸ ಹಾಗೂ ಪರೀಕ್ಷೆಗಳ ಕುರಿತು ಸಂವಾದ ನಡೆಸಿದರು.
ನಂತರ ಮಾತನಾಡಿದ ಅವರು ಪಟ್ಟಣದ ಸರಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆಯಲ್ಲಿ ಒಟ್ಟು 175 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿರುವುದು ತುಂಬಾ ಖುಷಿ ತಂದಿದೆ, ಉರ್ದು ಗಂಡು ಮಕ್ಕಳ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಬಹಳ ಕಡಿಮೆಯಾಗಿರುವದು ಬೇಸರದ ಸಂಗತಿ ಅದಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನಿಡುವದರ ಜೊತೆಗೆ ಕಡ್ಡಾಯವಾಗಿ ಪಾಲಕ ಪ್ರತಿನಿಧಿಗಳ ಸಭೆ ಕರೆದು ಅವರ ಪಠ್ಯ ಚಟುವಟಿಕೆಗಳ ಕುರಿತು ಮಾಹಿತಿ ನಿಡಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಿ,ಬೆಳಸಬೇಕು ಎಂದು ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿ ತಂದಿದು, ಶಿಕ್ಷಕರು ಇದರ ಲಾಭ ಪಡೆದಿಕೊಂಡು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಮುಂದೆ ಬರಬೇಕು, ಎಂದು ಸಲಹೆ ನಿಡಿದರು.
ಉರ್ದು ಹೆಣ್ಣು ಮಕ್ಕಳ ಶಾಲೆಯ ಮುಗು ಹಾಜೀಮಲಂಗ ಮುಲ್ಲಾ, ಉರ್ದು ಗಂಡು ಮಕ್ಕಳ ಶಾಲೆಯ ಮುಗು ರಿಯಾಜ ಚೌಧರಿ, ಶಿಕ್ಷಕರಾದ ಅಬ್ದುಲಶುಕುರ ಮಣ್ಣೂರ, ಎಮ್,ಎ,ಆಳ್ಳೂರ, ಸಿ.ಎಸ್.ಪಾಟೀಲ,ಫಯಾಜ ಮಳ್ಳಿ, ಶ್ರೀಮತಿ ಎಂ,ಬಿ,ವಾಲಿಕಾರ, ಶ್ರೀಮತಿ ಎಸ್.ಬಿ.ಗಾಲೀಬವಾಲೆ ಇದ್ದರು.