ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕಕ್ಕೆ ಭೂಮಿ ಪೂಜೆ


ನವಲಗುಂದ,ಜೂ.2: ಕೋರೋನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ನೂರಾರು ಸಾವುಗಳು ಸಂಭವಿಸಿದ್ದು ಆಕ್ಸಿಜನ್ ಕೊರತೆಯಿಂದ ಸಾವು ಆಗಬಾರದು ಎಂದು ತ್ವರಿತವಾಗಿ ಜನರ ಜೀವ ರಕ್ಷಣೆಗೆ ಅವಶ್ಯಕತೆ ಇರುವಂತಹ ದೇಶಪಾಂಡೆ ಫೌಂಡೇಷನ್ ವತಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ 280 ಲೀಟರ್ ಸಾಮಥ್ರ್ಯವುಳ್ಳ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಂಸದ ಪ್ರಲ್ಲಾದ ಜೋಶಿ ಹೇಳಿದರು.
ಅವರು ತಾಲೂಕಿನ ಆರೇಕುರಹಟ್ಟಿ ಕಾಳಜಿ ಕೇಂದ್ರ ವಿಕ್ಷಿಸಿ ಪಟ್ಟಣದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ದೇಶಪಾಂಡೆ ಫೌಂಡೇಶನ್ ವತಿಯಿಂದ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಆದ್ಯತೆ ನೀಡಿದೆ. ಆಕ್ಸಿಜನ್, ರೇಮಡಿಸಿವರ್, ಸೇರಿದಂತೆ ರಾಜ್ಯಕ್ಕೆ ಬಾರಿ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಅಪಪ್ರಚಾರಕ್ಕೆ ಕಿವಿಗೊಡದಿರೆಂದು ಹೇಳಿದರು. ಜಿಲ್ಲಾಡಳಿತ ಕೋರೋನಾ ಹತೋಟಿಗೆ ತರಲು ತಾಲೂಕು, ಗ್ರಾಮೀಣ ಪ್ರದೇಶದಲ್ಲಿ ಕಾಳಜಿ ಕೇಂದ್ರಗಳ ಮುಖಾಂತರ ಪ್ರಥಮ ಹಂತದಲ್ಲಿ ಮೆಡಿಕಲ್ ಕಿಟ್ ಹಾಗೂ ಇತರೆ ಸವಲತ್ತುಗಳನ್ನು ನೀಡಿ ಸೋಂಕಿತರು ಭಯಭೀತಿಗೊಳ್ಳದೇ ಆರೋಗ್ಯವಂತರಾಗಿ ಹೋಗಲು ಅಧಿಕಾರಿಗಳು, ವೈದ್ಯರು ಶ್ರಮಿಸುತ್ತಿದ್ದಾರೆಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಮುಜಾಗೃತಾ ಕ್ರಮಗಳನ್ನು ಪಾಲಿಸುವುದ ಸೂಕ್ತ ಸ್ವಲ್ಪ ಅಜಾರೂಕತೆಯಿಂದ ಇದ್ದರು ಸೋಂಕು ಹರಡಲು ದಾರಿ ಮಾಡಿದಂತಾಗುತ್ತದೆ. ಸ್ಥಳೀಯ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಕ್ಷೇತ್ರದ ಕಾಳಜಿಯಿಂದ ಆಕ್ಸಿಜನ್ ಘಟಕ ಆರಂಭಿಸಲು ಕಾರಣವಾಯಿತು. ಉತ್ಸಾಹಿ ಶಾಸಕರು ಸಾರ್ವಜನಿಕರ ಹಿತವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನಲ್ಲಿ ಕೋರೋನಾ ಸೋಂಕಿತರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸೌಕರ್ಯಗಳನ್ನು ಒದಗಿಸಿದ್ದು ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಕಾಳಜಿ ಕೇಂದ್ರಗಳನ್ನು ತೆರೆದು ಅನುಕೂಲತೆಗಳನ್ನು ಒದಗಿಸಿದ್ದಾರೆಂದು ಹೇಳಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ ಭರವಸೆ ನೀಡಿದಂತೆ ಮುತುವರ್ಜಿಯಿಂದ ಈ ಆಕ್ಸಿಜನ್ ಘಟಕದ ಭೂಮಿ ಪೂಜೆಯಾಗುತ್ತಿದೆ. ಉತ್ಪಾದನಾ ಘಟಕ ನಿರ್ಮಾಣದ ಜೊತೆ ಒಂದು ಟನ್ ಆಕ್ಸಿಜನ್ ಸಂಗ್ರಹ ಸಾಮಥ್ರ್ಯದ ಸ್ಟೋರೇಜ್ ಟ್ಯಾಂಕರ್‍ನ್ನು ಸಹ ನಿರ್ಮಿಸಲಾಗುತ್ತಿದೆ. ತಾಲೂಕಾ ವ್ಯಾಪ್ತಿಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೆ ಅನುಕೂಲವಾಗಲಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರ ಮನವಿಗೆ ಸ್ಪಂದಿಸಿದ ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಮತ್ತು ಸಿ.ಇ.ಓ ವಿವೇಕ ಪವಾರ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸಿದರು. ಇನ್ನು ಮುಂದಿನ ದಿನಗಳಲ್ಲಿ ಬಡ ಕುಟುಂಬಸ್ಥರಿಗೆ ಆಕ್ಸಿಜನ್, ಇತರೆ ಸೌಲಬ್ಯ ಇಲ್ಲವೆಂಬ ಪ್ರಶ್ನೆಯೇ ಬರುವುದಿಲ್ಲವೆಂದು ಹೇಳಿದರು. ಇದೇ ಸಂದರ್ಭದಲ್ಲಿ ಪುರಸಭೆಯ ರೂ. 5 ಲಕ್ಷ ವೆಚ್ಚದ ಶವಗಾರವನ್ನು ಹಸ್ತಾಂತರ ಮಾಡಲಾಯಿತು. 10 ಲೀಟರ್ ಸಾಮಥ್ರ್ಯದ 5 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ತಾಲೂಕಾ ಆಡಳಿತಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ, ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಉಪಾಧ್ಯಕ್ಷ ಖೈರುನಬೀ ನಾಶಿಪುಡಿ, ತಹಶೀಲ್ದಾರ ನವೀನ ಹುಲ್ಲೂರ, ಸಿ.ಪಿ.ಐ ಜಿ.ಸಿ.ಮಠಪತಿ, ಡಿ.ಎಚ್.ಓ ಹೋನಕೇರಿ, ಡಾ: ರೂಪಾ ಕಿಣಗಿ, ಮುಖ್ಯಾಧಿಕಾರಿ ಎನ್.ಎಚ್.ಖುದಾವಂದ, ಪಿ.ಎಸ್.ಐ ಜಯಪಾಲ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕಟ್ಟಿಮನಿ, ಪುರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಅಪ್ಪಣ್ಣ ಹಳ್ಳದ, ಸುರೇಶ ಮೇಟಿ, ಶಿವಾನಂದ ತಡಸಿ, ಜೀವನ ಪವಾರ, ಶರಣಪ್ಪ ಹಕ್ಕರಕಿ, ಮೋದಿನಸಾಬ ಶಿರೂರ ಇತರರು ಇದ್ದರು.