ಸರಕಾರಿ ಆದರ್ಶ ವಿದ್ಯಾಲಯ ಮಾದರಿ :ಚಿಮ್ಮನಕಟ್ಟಿ

???????????????????????????????????????????????????????????????????????????????????????????????????????????????????????????????????????????????????????????????????????????????????????????

ಬಾದಾಮಿ, ಮಾ28: ಖಾಸಗಿ ಶಾಲೆಗಳಿಗೆ ಸೊಡ್ಡು ಹೊಡೆದ ಸರಕಾರಿ ಆದರ್ಶ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದು ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದು ಕಾಳಿದಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶ ಶಾಲೆಯಲ್ಲಿ ಶಾಲಾ ಸಂಸತ್ತು, ಇಕೋ ಕ್ಲಬ್, ಭಾಷಾ ಸಂಘ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ಶಾಲೆಯ ಎಸ್ಸೆಸ್ಸಲ್ಸಿ ಫಲಿತಾಂಶವನ್ನು ಕಾತುರದಿಂದ ಕಾಯುತ್ತೇವೆ. ಉತ್ತಮ ಶಿಕ್ಷಕರನ್ನು ಒಳಗೊಂಡ ಆದರ್ಶ ವಿದ್ಯಾಲಯ ಶಾಲೆ ಮಾದರಿಯಾಗಿದೆ ಎಂದರು.
ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಜಿಲ್ಲಾ ಉಪಸಮನ್ವಯ ಅಧಿಕಾರಿಯಾಗಿ ಪದೋನ್ನತಿ ಹೊಂದಿದ ಶ್ರೀಮತಿ ಜಾಸ್ಮಿನ್ ಕಿಲ್ಲೇದಾರ್ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿ ಜಾಸ್ಮೀನ ಕಿಲ್ಲೇದಾರ ಮಾತನಾಡಿ ಶಾಲೆಯ ವಾತಾವರಣ ಶುದ್ದೀಕರಣದಂತೆ ಮಕ್ಕಳಿಗೆ ಉತ್ತಮ ಅಧ್ಯಯನಕ್ಕೆ ಅನುಕೂಲವಾಗಲಿದೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿದ್ದೆ ನನ್ನ ಭಾಗ್ಯ ಎಂದರು.
ಅಧ್ಯಕ್ಷತೆಯನ್ನು ನೂತನ ಪ್ರಾಚಾರ್ಯ ರಾಮಚಂದ್ರ ಭಜಂತ್ರಿ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ವಿವೇಕಾನಂದ ಮೇಟಿ, ಪತ್ರಕರ್ತ ಉಮೇಶ್ ಬಿಕ್ಷಾವರ್ತಿಮಠ, ಲಿಂಗರಾಜ ಚಿನಿವಾಲರ್, ರಾಣಿ ಚನ್ನಮ್ಮ ಪ್ರಾಚಾರ್ಯ ಮಂಜುನಾಥ ಅಂಗಡಿ, ಶಂಕರರಾವ್ ಕುಲಕರ್ಣಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಬಸವರಾಜ ಚಿಕ್ಕಣ್ಣನವರ ಸ್ವಾಗತಿಸಿದರು. ನಿಂಗಪ್ಪ ಚೂರಿ ನಿರೂಪಿಸಿದರು. ರಮೇಶ್ ಕತ್ತಿಕೈ ವಂದಿಸಿದರು.