ಸರಕಾರಿತಾಯಿ, ಮಕ್ಕಳ ಆಸ್ಪತ್ರೆಯಲ್ಲಿರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ


ಹೊಸಪೇಟೆ (ವಿಜಯನಗರ)  ಜ.31: (ಕ.ವಾ.):ಹೊಸಪೇಟೆತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತುಜಿಲ್ಲಾಆರೋಗ್ಯ ಇಲಾಖೆ ಇವರ ಸಂಯುಕ್ತಆಶ್ರಯದಲ್ಲಿನಗರದಸರಕಾರಿತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಜನವರಿ 30ರಂದು ಸ್ವಚ್ಛತಾ ಸೇವೆ ಮೂಲಕ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯನ್ನುವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿಗೌರವಾನ್ವಿತಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯಅಧ್ಯಕ್ಷರಾದ ಹೇಮಲತಾ ಬಿ.ಹುಲ್ಲೂರು, ಹಿರಿಯ ಸಿವಿಲ್ ನ್ಯಾಯಧೀಶರಾದರಮೇಶ ಬಾಬು ಬಿ.ಎನ್., 3ನೇ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಧೀಶರಾದಚೈತ್ರ.ಜೆ.,ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಎಲ್.ಆರ್.ಶಂಕರ್ ನಾಯ್ಕ,ತಾಯಿ ಮಕ್ಕಳ ಆಸ್ಪತ್ರೆಯ ಅಧಿಕಾರಿಗಳಾದ ಡಾ.ನೂರ್ ಬಾಷ, ತಾಲ್ಲೂಕಆರೋಗ್ಯಾಧಿಕಾರಿಗಳಾದ ಡಾ.ಬಾಸ್ಕರ್, ವಕೀಲ ಸಂಘದಅಧ್ಯಕ್ಷರಾದ ಕೆ.ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿಗಳಾದ ಪಿ.ಶ್ರೀನಿವಾಸ ಮೂರ್ತಿ ಸೇರಿದಂತೆಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡುಸ್ವಚ್ಛತಾಕಾರ್ಯಕ್ಕೆ ಕೈಜೊಡಿಸಿದರು.