ಸರಕಾರವು ಗುತ್ತಿಗೆ ನೌಕರರಿಗೆ ತಾರತಮ್ಯ ಮಾಡ ಕೂಡದು:ವೀರಭದ್ರಪ್ಪ ಉಪ್ಪಿನ

ಬೀದರ:ಫೆ.19:ಕರ್ನಾಟಕ ರಾಜ್ಯ ಏಡ್ಸ್ ಪ್ರವೇಶನ ಸೊಸೈಟಿ ಅಡಿಯಲ್ಲಿ, ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರುಗಳು (ಐಸಿಟಿಸಿ ವಿಭಾಗ ಎಆರ್‍ಟಿ, ಡಿಎಸ್ ಆರ್‍ಸಿ ವಿಭಾಗಗಳು) ಬೆಂಗಳೂರಿನ ಫ್ರೀಡಂ ಪಾಕ್ರ್ನಲ್ಲಿ ಫೆ. 19. ರಿಂದ ಅನಿರ್ದಿಷ್ಟ ಅವಧಿಯ ರಾಜ್ಯ ಮಟ್ಟದ ಮುಷ್ಕರ ನಡೆಸಲು ಉದ್ದೇಶಿಸಲಾಗಿದೆ. ಈ ಮುಷ್ಕರದಲ್ಲಿ ಭಾಗವಹಿಸಲು ಬೀದರ್ ಜಿಲ್ಲೆಯಿಂದ ಕೆಸಾಫ್ ಹಾಗೂ ವಿವಿಧ ಶ್ರೇಣಿಯ ಗುತ್ತಿಗೆ ನೌಕರರು ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಅವರಿಗೆ ಇಂದು ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ರವಾನೆ ಮಾಡಲಾಯಿತು.
ಬೀದರ್ ಜಿಲ್ಲೆಯಲ್ಲಿ 44 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಾದ್ಯಂತ 1800 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಷ್ಕರದ ತಂಡಕ್ಕೆ ಚಾಲನೆ ನೀಡಿದ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಜೀವವನ್ನು ಪಣಕಿಟ್ಟು ಪ್ರಾಮಾಣಿಕವಾಗಿ, ಎಚ್‍ಐವಿ ಸೊನ್ನೆಗೆ ತರಲು ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯ ಬೇಕು. ಸೇವಾ ಭದ್ರತೆ ಸಿಗಬೇಕು ಎಂದು ಒತ್ತಾಯಿಸಿದರು.
ಫೆ. 19 ರಿಂದ ಏಚ್ ಐ ವಿ ಪರೀಕ್ಷೆ ಹಾಗೂ ಎ ಆರ್ ಟಿ ಚಿಕಿತ್ಸೆಗೆ ಸೌಲಭ್ಯ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿಯಾದ ಅರವಿಂದ್ ಕುಲಕರ್ಣಿ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿ, ಮನವಿ ಮಾಡಿದರು.
ಮುಷ್ಕರ ತಂಡದಲ್ಲಿ ಅಧ್ಯಕ್ಷರು ಸೂರ್ಯಕಾಂತ್ ಸಂಗೋಳ್ಕರ್, ಕಾರ್ಯದರ್ಶಿಗಳು ಸಂತೋಷ್ ಸಿಂಧೆ, ಸಂಘಟನಾ ರಾಜ್ಯ ನಿರ್ದೇಶಕರು ದಿಗಂಬರ್ ಹುಲಸೂರ್ ,ಸಂಜೀವ್ ಕುಮಾರ್, ಲಕ್ಷ್ಮಿ ವೈದ್ಯ, ಸುನಿತಾ, ವಾಣಿ, ಗೀತಾ ಪಾಟೀಲ್, ಗೀತಾ ರೆಡ್ಡಿ, ಕಲ್ಪನಾ, ವಿಕ್ರಂ, ತುಳಸಮ್ಮ ಮಹಾಂತೇಶ್ ಪಾಟೀಲ್, ಸಂಜು ಕುಮಾರ್ ರಾಜೇಶ್ವರ್, ಸದಾಶಿವ ಘಾಟ್,ಬಸಪ್ಪ, ಸಿದ್ದಾರೂಢ, ಶಿವಕುಮಾರ್ ವಾಲದೊಡ್ಡಿ, ವಲ್ಲಭ, ಶಿವಕುಮಾರ್ ಪಿ, ಮುಂತಾದವರು ಮುಷ್ಕರಕ್ಕೆ ತೆರಳಿದ್ದರು.