ಸರಕಾರದ ಸೌಲಭ್ಯ ಪಡೆದುಕೊಳ್ಳಿ: ಪೂಜಾರ

ಬಾದಾಮಿ,ಮಾ19: ಸರಕಾರದಿಂದ ವಿಕಲಚೇತನರಿಗೆ ಮತ್ತು ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳಿದ್ದು, ಪ್ರತಿ ದಿನ ಶಾಲೆಗೆ ಕಳುಹಿಸುವ ಮೂಲಕ ಪಾಲಕರು ತಮ್ಮ ಮಕ್ಕಳಿಗೆ ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಚೋಳಚಗುಡ್ಡ ಗ್ರಾ.ಪಂ.ಸದಸ್ಯ ಅಭಿಷೇಕ ಪೂಜಾರ ಹೇಳಿದರು.
ಅವರು ಶುಕ್ರವಾರ ಸಮೀಪದ ಬನಶಂಕರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಕೊಡಮಾಡಿದ ಉಚಿತ ಕನ್ನಡವನ್ನು ಸ್ವಪ್ನಾ ಹುಲ್ಲಿಕೇರಿ ಮಗುವಿಗೆ ವಿತರಣೆ ಮಾಡಿ ಮಾತನಾಡಿದರು. ಈ ಶಾಲೆಯು ಸ್ವಚ್ಚ ವಿದ್ಯಾಲಯ ಪುರಸ್ಕಾರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದು, ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎಪ್ರಿಲ್ 10 ರ ವರೆಗೆ ಬನಶಂಕರಿ ಶಾಲೆಗೆ ಉಚಿತ ಮೊಟ್ಟೆ ವಿತರಣೆ
ಬಾದಾಮಿ; ಸರಕಾರ ಅಕ್ಷರದಾಸೋಹ ಯೋಜನೆಯಡಿ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಸರಕಾರದ ಆದೇಶದಂತೆ ಫೆಬ್ರುವರಿ ಕೊನೆಗೆ ಮುಕ್ತಾಯವಾಗಿದೆ. ಆದರೆ ಈ ಶೈಕ್ಷಣಕ ವರ್ಷ ಮುಗಿವವರೆಗೆ ಎಪ್ರಿಲ್ 10 ರ ವರೆಗೆ ನನ್ನ ವೈಯಕ್ತಿಕ ಖರ್ಚಿನಿಂದ ಮೊಟ್ಟೆ ನೀಡುವುದಾಗಿ ಗ್ರಾ.ಪಂ.ಸದಸ್ಯ ಅಭಿಷೇಕ ಪೂಜಾರ ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಪಾರ್ವತಿ ಚಳಗೇರಿ, ಸಹಶಿಕ್ಷಕರು, ಮಕ್ಕಳು ಹಾಜರಿದ್ದರು.