ಸರಕಾರದ ವಿರುದ್ಧ ಬೊಮ್ಮನಳ್ಳಿ ಆಕ್ರೋಶ

ಕಲಬುರಗಿ: ಜೂ.8:ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದು, ಅದರಲ್ಲಿ ತಿಂಗಳಿಗೆ 200 ವಿದ್ಯುತ್ ಉಚಿತ ಯುನಿಟ್ ನೀಡುವುದಾಗಿ ಘೋಷಿಸಿತ್ತು, ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ವಿದ್ಯುತ್ ದರವನ್ನು ಪ್ರತಿ ಯುನಿಟಗೆ 1.39 ಪೈಸೆ ಹೆಚ್ಚಳ ಮಾಡಿ ಜನಸಾಮಾನ್ಯರ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದು ಹಗಲು ದರೋಡೆಗೆ ಇಳಿದಿದೆ ಎಂದು ಚಿತ್ತಾಪುರ ಬಿಜೆಪಿ ಮಂಡಲ ನಗರ ಕಾರ್ಯದರ್ಶಿ ಗಿರೀಶ ಬೊಮ್ಮನಳ್ಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸರಕಾರ ಅಧಿಕಾರಕ್ಕೆ ಬಂದು 15 ದಿನ ಕಳೆದಿಲ್ಲ ತೆರಿಗೆ ಹೆಚ್ಚಳ ಮಾಡಿ ಆಗಲೇ ಜನಸಾಮಾನ್ಯರ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಿದೆ.ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಉಚಿತ ವಿದ್ಯುತ್, ಗೃಹಲಕ್ಷ್ಮಿ , ನಿರುದ್ಯೋಗ ಯುವಕರಿಗೆ ಭತ್ಯೆ,ಮಹಿಳೆಯರಿಗೆ ಉಚಿತ ಬಸ ಪಾಸ್, 10 ಕೆಜಿ ಉಚಿತ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಈಗ ಅವುಗಳನ್ನು ಈಡೇರಿಸುವ ಸಲುವಾಗಿ ಇಲ್ಲಸಲ್ಲದ ನಿಯಮಗಳನ್ನು , ಕಂಡೀಷನಗಳನ್ನು ಹಾಕಿ ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ತೆರಿಗೆಯ ಭಾರ ಹೊರಿಸಿ, ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯಾಗಿ ಮಾಡಲು ಹೊರಟಿದೆ.ರೈತರ ಪರವಾಗಿ ಬಡವರ ಪರವಾಗಿ ಶಿಕ್ಷಣ ಆರೋಗ್ಯ ಯೋಜನೆಗಳ ಕುರಿತಾಗಿ ಆಲೋಚನೆ ಮಾಡಿಲ್ಲ.ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ವಾಮಮಾರ್ಗ ಅನುಸರಿಸಿ, ರಾಜ್ಯದ ಜನರನ್ನು ದಿಕ್ಕು ತಪ್ಪಿಸುವುದರ ಮೂಲಕ ಬಡ ಸಾಮಾನ್ಯರನ್ನು ಸಾಲದ ಸೂಲಕ್ಕೆ ಸಿಲುಕಿಸುತ್ತಿದ್ದು, ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವಿದ್ಯುತ್ ದರವನ್ನು ಏರಿಸಲು ಹೊರಿಟಿರುವುದನ್ನು ಕೈ ಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.