ಸರಕಾರದ ಯೋಜನೆ ಸದುಪಯೋಗಮಾಡಿಕೊಳ್ಳಿ -ಪಿಡಿಒ

ಮುದಗಲ್.ನ.07- ವಿಕಲಚೇತನರಿಗೆ ಬರುವ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿಬೇಕು ಉಪ್ಪಾರನಂದಿಹಾಳ ಗ್ರಾಮ ಪಂಚಾಯತಿಯ 14 ನೇ ಹಣಕಾಸು ಯೋಜನೆಯಡಿ ವಿಕಲಚೇತನರಿಗೆ ಮೀಸಲಿಟ್ಟ ಶೇಕಡ 5 ರ ಅನುಧಾನದಡಿಯಲ್ಲಿ ಉಪ್ಪಾರನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಸುಮಾರು 35 ವಿಕಲಚೇತನ ಪಲಾನುಭವಿಗಳಿಗೆ ಗಾಲಿ ಕುರ್ಚಿ ತ್ರಿಚಕ್ರ ಸೈಕಲ್, ವಾಕರ್, ಕ್ರಚಸ್, ವಾಕಿಂಗ್ ಸ್ಟಿಕ್. ಶ್ರವಣ ಸಾಧನ, ಕೇನ್, ಟ್ವಿಲೈಟ್ ಚೇರ್ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಪಂಚಾಯತ ಅಭಿವೃದ್ಧಿ ಅಧಿಕಾರಿ ತಿಮ್ಮಣ್ಣ ಗಬ್ಬೂರು ವಿಕಲಚೇತನರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಲ್ ಕಲೆಕ್ಟರಾದ ಗದ್ದೆಪ್ಪ ನಾಗರಾಳ, ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಹುಸೇನಬಾಷಾ ಬನ್ನಿಗೋಳ. ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಭಂಡಾರಿ ಮುದಗಲ್, ಸದಸ್ಯರಾದ ಆಶ್ಕಿಹಾಳ ನಾಗರಾಜ ಲಿಂಗಸುಗೂರು, ಮಹಾದೇವಿ ಕನ್ನಾಪೂರಹಟ್ಟಿ, ಗ್ರಾಮ ಪಂಚಾಯಿತಿ ವಿ.ಆರ್.ಡಬ್ಲ್ಯೂ ಗಳಾದ ಬೀರಪ್ಪ ಕಿಲ್ಲಾರಹಟ್ಟಿ ರಾಯಚೂರು ಆರ್.ಪಿ.ಡಿ. ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು ಹಾಗೂ ವಿಕಲಚೇತನರ ಪಲಾನುಭವಿಗಳು ಹಾಗೂ ಪಾಲಕರು ಇದ್ದರು.