ಸರಕಾರದ ನಿಯಮಗಳನ್ನು ಸರ್ವರೂ ಪಾಲಿಸಿ ಭಾಸ್ಕರರಾವ್ ಮನವಿ

ವಿಜಯಪುರ, ಏ.27-ಸಾಮಾಜಿಕ ಅಂತರ ಕಡ್ಡಾಯ ಮಾಸ್ಕಧರಿಸುವುದು ಸರಕಾರದ ನಿಯಮಗಳನ್ನು ಸರ್ವರೂ ಪಾಲಿಸಿ ಸಾಂಕ್ರಾಮಿಕ ರೋಗ ಕೊರೋನಾ ನಿರ್ಮೂಲನೆಗಾಗಿ ಎಲ್ಲ ಧರ್ಮದ ಧರ್ಮಗುರುಗಳು ಎಲ್ಲಾ ಭಕ್ತಾಧಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಹೆಚ್ಚುವರಿ ಪೋಲಿಸ್‍ಮಹಾ ನಿರ್ದೇಶಕ ಭಾಸ್ಕರರಾವ ಮನವಿ ಮಾಡಿದ್ದಾರೆ.
ಕೋವಿಡ್ ತಡೆಗಟ್ಟುವ ಮಾರ್ಗಸೂಚಿ ಪಾಲನೆಗಾಗಿ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೂ ನಗರದ ಜ್ಞಾನಯೋಗಾಶ್ರಮಕ್ಕೆ ಭೇದಟಿ ನೀಡಿ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ಆಶೀರ್ವಾದ ಪಡೆದು ಅವರಲ್ಲಿ ಉತ್ತರ ಕರ್ನಾಟಕದಲ್ಲಿ ಅಪಾರ ಜನ ಭಕ್ತಾಧಿಗಳಿಗೆ ಸಾಂಕ್ರಾಮಿಕ ರೋಗ ಕೋವಿಡ್ ನಿರ್ಮೂಲನೆಗಾಗಿ ಎಲ್ಲರಲ್ಲಿ ಜಾಗೃತಿ ಮೂಡಿಸಿ ದಿನ ದಲಿತರಿಗೆ, ನಿರ್ಗತಿಕರಿಗೆ ಬಡವರಿಗೆ ಕಷ್ಟ ಕಾಲದಲ್ಲಿ ಅವರಿಗೆ ಉಳ್ಳವರು ಎಲ್ಲಾ ರೀತಿಯ ಸಹಾಯ ಮಾಡಬೇಕು. ಸರಕಾರ ರೋಗ ನಿರ್ಮೂಲನೆಗಾಗಿ ಜನರ ಪ್ರಾಣ ಕಾಪಾಡಲು ಲಾಕಡೌನ ನಂತಹ ಕ್ರಮಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗಿದೆ. ಸರಕಾರದ ನಿಯಮ ನಿರ್ದೇಶನ ಎಲ್ಲರೂ ಪಾಲಿಸಬೇಕು. ಮಾಸ್ಕ ಸಾಮಾಜಿಕ ಅಂತರ ಬಗ್ಗೆ ಎಲ್ಲರೂ ಚಾಚು ತಪ್ಪದೆ ಪಾಲಿಸಬೇಕು. ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಸಾಮಾಜಿಕ ಜಾಲತಾಣ ಮುಖಾಂತರ ತಮ್ಮ ಎಲ್ಲಾ ಭಕ್ತಾಧಿಗಳಿಗೆ ಸಂದೇಶ ನೀಡಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭಧಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಾಸ್ಕರರಾವ ಇವನ್ನು ಸನ್ಮಾನಿಸಿ, ಇಂದು ಬಹಳ ಕಷ್ಟದ ಸಮಯ. ಮನುಕುಲಕಕ್ಕೆ ಬಂದಿದೆ ಎಲ್ಲರು ಮಾನವಿಯತೆ ಧರ್ಮ ಪಾಲಿಸಿ ಬೇರೆಯವರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಜೈನ ಸಮಾಜ, ಮುಸ್ಲಿಂ ಸಮಾಜ ಹಿಂದೂ ಸಮಾಜದ ವಿವಿಧ ಮುಖಂಡರು ಭಾಸ್ಕರರಾವ ಅವರಿಗೆ ಭೇಟಿಯಾಗಿ ಕೋವಿಡ್ ನಿರ್ಮೂಲನೆಗಾಗಿ ತಾವುಗಳು ನಗರದಲ್ಲಿ ಕೈಗೊಂಡ ವಿವಿಧ ಸೇವಾ ಕಾರ್ಯಗಳ ವಿವರವನ್ನು ನೀಡಿದರು. ಭಾಸ್ಕರರಾವ ಎಲ್ಲಾ ಮುಖಂಡರಿಗೆ ಹೆಚ್ಚಾಗಿ ಉಚಿತ ಮಾಸ್ಕ ವಿತರಿಸಿ, ಹಾಗೂ ಅನಾವಶ್ಯಕ ತಿರುಗಾಡದಂತೆ ಸಾಮಾಜಿಕ ಅಂತರ ಕಾಪಾಡಲು ಪೋಲಿಸರ ಜೊತೆ ಸಹಕರಿ ಎಂದು ಸಲಹೆ ನೀಡಿದರು.
ರವಿವಾರ ನಗರ ಲೌಕಡೌನ ಇರುವದರಿಂದ ಸೋಲಾಪುರ ರಸ್ತೆ, ಜುಮ್ಮಾ ಮಸೀದಿ, ಜಲನಗರ, ಅಥಣಿ ರಸ್ತೆ, ಬೇಟಿ ನೀಡಿ ಪರಿಶೀಲಿಸಿದರು.