ಸರಕಾರದ ತೀರ್ಮಾನಕ್ಕೆ ಸಿದ್ದಣ್ಣ ಟಣಕೇದಾರ ಹರ್ಷ

(ಸಂಜೆವಾಣಿ ವಾರ್ತೆ)
ಶಹಾಪುರ : ಜೂ.30: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಅಡಿ ನೀಡುತ್ತಿದ್ದ ಕಾಮಗಾರಿ ಮೊತ್ತವನ್ನು 50ಲಕ್ಷ ಗಳಿಂದ 1 ಕೋಟಿ ರೂ.ಗೆ ಏರಿಕೆ ಮಾಡಿದ ಸರಕಾರದ ಕ್ರಮ ಶ್ಲಾಘನೀಯ ಎಂದು ಗುತ್ತಿಗೆದಾರರ ಸಂಘಕ್ಕೆ ಖುಷಿ ತಂದಿದೆ ಎಂದು ಸಿದ್ದಣ್ಣ ಟಣಕೇದಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಮಹಾದೇವ ಸ್ವಾಮಿ ಅವರ ನೇತೃತ್ವದಲ್ಲಿ ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿದ ಸರಕಾರ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಮೀಸಲಾತಿ ಅಡಿಯಲ್ಲಿ 1 ಕೋಟಿ ರೂ. ವರೆಗೆ ಕಾಮಗಾರಿ ಮಾಡಲು ಅನುಮೋದನೆ ನೀಡಿರುವುದು
ಸದಾ ಬಡವರ ಪರವಾದ ಸಾಮಾಜಿಕ ಕಳಕಳಿ ಹೊಂದಿರುವ ಕಾಂಗ್ರೆಸ್ ಸರಕಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದರು. ಇದೀಗ ಮತ್ತೆಈ ಮೀಸಲಾತಿ ಅಡಿಯಲ್ಲಿ ಕಾಮಗಾರಿ ಮೊತ್ತವನ್ನು ಏರಿಕೆ ಮಾಡಿದ್ದು ಕೆಳ ಸಮುದಾಯದ ಜನರಿಗೆ ಏಳೆಗೆ ಬೂಸ್ಟ ಡೋಸ್ ಕೊಟ್ಟಂತಾಗಿದೆ ಎಂದು ಸಿದ್ದಣ್ಣ ಟಣಕೇದಾರ ಹೇಳಿದರು