ಸರಕಾರದ ಆದೇಶ ಪಾಲಿಸಿದ ಹೊನ್ನಾಳಿ ಜನತೆ

ಹೊನ್ನಾಳಿ.ಏ.೨೮; ಸರ್ಕಾರದ ಆದೇಶದಂತೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಹೇರಲಾಗಿದ್ದು ಹೊನ್ನಾಳಿಯಲ್ಲಿ ಸರಕಾರದ ಆದೇಶವನ್ನು ಚಾಚು ತಪ್ಪದೆ ಗ್ರಾಹಕರು ಪಾಲಿಸಿದ್ದಾರೆ ಎಂದಿನಂತೆ ಬೆಳಿಗ್ಗೆ 6ಘಂಟೆಯಿಂದ ಹತ್ತು ಗಂಟೆವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದು ನಂತರ ಎಲ್ಲಾ ಗ್ರಾಹಕರು ಹತ್ತು ಗಂಟೆಗೆ ಸರಿಯಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸಿದ್ದಾರೆ  ಹಾಗೂ ಆಟೊ ಖಾಸಗಿ ಬಸ್ ಕೆಎಸ್ ಆರ್ ಟಿಸಿ ಬಸ್ಸುಗಳು ಸಹ ಓಡಾಡದೆ ಹೊನ್ನಾಳಿಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದು ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ  ಜನಗಳಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದ ದೃಶ್ಯ ಕಂಡುಬಂದಿತು.