ಸಮ ಸಮಾಜದ ಹರಿಕಾರ ಸಂತ ಕವಿ ಶ್ರೇಷ್ಠ ಕನಕದಾಸ : ನ್ಯಾಯವಾದಿ ದಾನೇಶ ಅವಟಿ

ವಿಜಯಪುರ:ಡಿ.3:ಜಾತಿ, ಧರ್ಮ, ಮv,À ಪಂx,À ಮೇಲು ಕೀಳೆಂದು ಕಿತ್ತಾಡದೆ ದೇವರ ಸೃಷ್ಟಿಯಾದ ಈ ಭೂಮಂಡಲದ ಮೇಲೆ ಸರ್ವರು ಸರಿಸಮಾನರು ಎಂದು ಸಮಸಮಾಜದ ಹರಿಕಾರ ಸಂತ ಕವಿಶ್ರೇಷ್ಠ ಕನಕದಾಸರು ಸಾರಿದ ನುಡಿಗಳು ಎಂದೆಂದಿಗೂ ಸರ್ವಕಾಲಿಕ ಸತ್ಯ ಎಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.

ನಗರದ ದರ್ಗಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಚನ್ನಮ್ಮ ಘರ್ಜನೆ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಕನಕ ಜಯಂತಿ ನಿಮಿತ್ಯ ಕನಕದಾಸರ ಶ್ರೀ ಬಸವೇಶ್ವರರ ಭಾವಚಿತ್ರಗಳಿಗೆ ಪುಷ್ರ್ಪಾಪಣೆ ಸಲ್ಲಿಸಿ ಶ್ರೀ ವೀರಭದ್ರೆಶ್ವರ ಮೂರ್ತಿಗೆ ಕಾರ್ತಿಕೋತ್ಸವದ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಮಾನವ ಜನ್ಮಕ್ಕೆ ಬಂದು ಕುಲ – ಕುಲವೆಂದು ಕಚ್ಚಾಡದೆ, ಶಾಂತಿ ಸಹಬಾಳ್ವೆಯಿಂದ ಬಾಳಿರಿ. ಕುಲವಿಲ್ಲ ಸತ್ಯ ಸುಖವನ್ನು ಬಲ್ಲವರಿಗೆ, ಆತ್ಮ ಜ್ಞಾನಿಗಳಿಗೆ ಕುಲ-ಛಲ ಮೊದಲಾದ ಅಷ್ಟಮದಗಳಿಲ್ಲ ಎಂದು ಶಾಶ್ವತ ಸುಖವನ್ನು ಭೋದಿಸಿದ ಕನಕದಾಸರು ಮಹಾಮಾನವತಾದಿ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ಮುಖಂಡ ರಾಜು ಬಿರಾದಾರ, 15ನೇ ಶತಮಾನದ ಸಂತ ಶ್ರೇಷ್ಠ ಕನಕದಾಸರು ಹಾಲುಮತ ಸಮಾಜ ಬಾಂಧವರಾದರೂ ಯಾವುದೇ ಜಾತಿ ಮತ ಪಂಥಗಳಿಗೆ ಕಟ್ಟು ಬೀಳದೆ ಸಂತ ಶ್ರೇಷ್ಠ ಎನಿಸಿಕೊಂಡರು. ಆಧ್ಯಾತ್ಮದ ಮೇರು ಶಿಖರವಾದರು. ಅವರು ರಚಿಸಿದ ಕೀರ್ತನೆ, ಸುಳಾದಿ, ಉಗಾಭೋಗ, ಮುಂಡಿಗೆ ಪದಗಳು, ಜನರ ನಾಲಿಗೆ ಮೇಲೆ ಜನಜನಿತವಾಗಿವೆಯಲ್ಲದೆ ಮಾನವ ಜನಾಂಗಕ್ಕೆ ಅವರ ಬೋಧÀನೆಗಳು ದಾರಿದೀಪವಾಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ವಿಜಯಕುಮಾರ ಹಿರೊಳ್ಳಿ, ಆಕಾಶ ಬಡಿಗೇರ, ಬಸವರಾಜ ಶೆಟಗಾರ, ಶ್ರೀಶೈಲ ಹದನೂರ, ದಯಾನಂದ ಸಾವಳಗಿ, ಚನಬಸಯ್ಯ ಹಿರೇಮಠ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚೆನ್ನಮ್ಮ ಘರ್ಜನೆ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ಅವಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂತು ಶಿರಾಳಶೆಟ್ಟಿ ನಿರೂಪಿಸಿದರು. ಜಗದೀಶ ಬಿರಾದಾರ ವಂದಿಸಿದರು. ಅನೇಕ ಜನ ಹಿರಿಯರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದು, ಕಾರ್ತಿಕೋತ್ಸವದ ದೀಪ ಬೆಳಗಿಸಿ ಅನೇಕ ಭಕ್ತಿಗೀತೆಗಳನ್ನು ಹಾಡಿ ಮಹಾಪ್ರಸಾದ ಹಂಚುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಳಿಸಿದರು.